ಚೆನ್ನೈ : ನವಜಾತ ಹೆಣ್ಣುಮಗುವಿನ ಮೃತದೇಹ ಶೌಚಾಲಯದ ಫ್ಲಶ್ ಟ್ಯಾಂಕ್ನಲ್ಲಿ ಪತ್ತೆಯಾದ ಘಟನೆ ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆ(ಟಿಎಂಸಿಹೆಚ್)ಯಲ್ಲಿ ನಡೆದಿದೆ.
ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರು ತೀವ್ರ ನಿಗಾ ಘಟಕದ (ಐಸಿಯು) ಶೌಚಾಲಯ ಸ್ವಚ್ಛಗೊಳಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಫ್ಲಶ್ ಟ್ಯಾಂಕ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಮುಚ್ಚಳವನ್ನು ತೆರೆದು ನೋಡಿದ್ದಾರೆ. ನವಜಾತ ಶಿಶುವಿನ ಶವ ಟ್ಯಾಂಕ್ನ ನೀರಿನಲ್ಲಿ ಮುಳುಗಿರುವುದು ಕಂಡುಬಂದಿದೆ.