ಲಕ್ನೋ: ತನ್ನನ್ನು ಚುಡಾಯಿಸಿದ್ದಲ್ಲದೆ, ಕಾಮತೃಷೆ ತೀರಿಸಿಕೊಳ್ಳಲು ಕರೆದ ವ್ಯಕ್ತಿಯನ್ನು ಯುವತಿಯೋರ್ವಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗ್ರಾಮದ ಮುಖಂಡೆಯ 50 ವರ್ಷದ ಪತಿ ತನ್ನನ್ನು ಚುಡಾಯಿಸುತ್ತಿದ್ದ. ಅಲ್ಲದೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ. ಆತನ ಕಾಟ ತಡೆಯಲಾಗದೇ ಈ ಕೃತ್ಯ ಮಾಡಿದ್ದಾಗಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ.
ತನ್ನ ಆಸೆ ಪೂರೈಸದೇ ಹೋದಲ್ಲಿ ಕುಟುಂಬದವರಿಗೂ ತೊಂದರೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಕಾನೂನು ಕೈಗೆತ್ತಿಕೊಂಡಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.