ಪತಿಯೊಟ್ಟಿಗೆ ಬಾಡಿಗೆ ಮನೆ ಹುಡುಕಿಕೊಂಡು ಹೋದ 28 ವರ್ಷದ ಮಹಿಳೆಯ ಮೇಲೆ 7 ಜನರು ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ನಡೆದಿದೆ. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.
ಪೀಡಿತೆ ಮತ್ತು ಆಕೆಯ ಪತಿ ಸೋಮವಾರ ರಾತ್ರಿ ಮಹಿಳೆಯೋರ್ವರ ನೆರವಿನಿಂದ ಶಾಮ್ನಗರ ಕೊಳಗೇರಿಯಲ್ಲಿ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದರು. ರಾತ್ರಿ ಬಹಳ ಹೊತ್ತಾಗಿದ್ದರಿಂದ ದಂಪತಿ ಮನೆ ತೋರಿಸಲು ಬಂದಿಂದ್ದ ಮಹಿಳೆಯ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಆ ಸಂದರ್ಭದಲ್ಲಿ ಮನೆಗೆ ಸುಮಾರು 8 ಜನರಿದ್ದ ಗುಂಪು ಪತಿಯನ್ನು ಹೊರಗೆಳೆದೊಯ್ದು ಎದುರಿಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿತ್ತು.
ಘಟನೆ ಬಳಿಕ ಮಹಿಳೆ ತನ್ನ ಪತಿಯೊಂದಿಗೆ ಅಂಬೋಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪೀಡಿತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ