ಹರಿಯಾಣಾದ ರೋಹ್ಟಕ್ನಲ್ಲಿ ನಿರ್ಭಯಾ ಪ್ರಕರಣದಂತೆ ನಡೆದಿರುವ ಗ್ಯಾಂಗ್ರೇಪ್ ಮಾಸುವ ಮುನ್ನವೇ ಮೂವರು ಕಾಮುಕರ ಸಿಕ್ಕಿಂ ಮೂಲದ ಮಹಿಳೆಯನ್ನು ಅಪಹರಿಸಿ ಗ್ಯಾಂಗ್ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ.
ಮಹಿಳೆ ತನ್ನ ಗೆಳೆಯನನ್ನು ಭೇಟಿ ಮಾಡಲು ಕನ್ಹಾಟ್ ಪ್ರದೇಶಕ್ಕೆ ತೆರಳಿದ್ದಳು. ನಂತರ ಬೆಳಗಿನ ಜಾವ 2 ಗಂಟೆಗೆ ಮನೆಗೆ ಮರಳುತ್ತಿರುವಾಗ, ಆರೋಪಿಗಳು ಮನೆಯ ಬಳಿಯೇ ಆಕೆಯನ್ನು ಸ್ವಿಫ್ಟ್ ಕಾರಿನಲ್ಲಿ ಅಪಹರಿಸಿ 20 ಕಿ.ಮೀ ದೂರದಲ್ಲಿರುವ ನಜಾಫ್ಗಢ್ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಲಿಸುತ್ತಿರುವ ಕಾರಿನಲ್ಲಿಯೇ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳು ಗ್ಯಾಂಗ್ರೇಪ್ ಎಸಗಿದ ನಂತರ ನಿರ್ಜನ ರಸ್ತೆಯ ಮೇಲೆ ಮಹಿಳೆಯನ್ನು ಎಸೆದು ಪರಾರಿಯಾಗಿದ್ದಾರೆ.
ದಾರಿಹೋಕರ ನೆರವು ಪಡೆದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಮೂವರು ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.