Webdunia - Bharat's app for daily news and videos

Install App

ಚಲಿಸುತ್ತಿರುವ ರೈಲಿನಲ್ಲಿಯೇ ಮಹಿಳೆಯ ಮೇಲೆ ಭೀಕರ ಅತ್ಯಾಚಾರ

Webdunia
ಮಂಗಳವಾರ, 13 ಜೂನ್ 2017 (20:36 IST)
ಮುಂಬೈನಿಂದ ಜೈಪುರ್‌ಗೆ ತೆರಳುತ್ತಿದ್ದ 32 ವರ್ಷ ವಯಸ್ಸಿನ ಮಹಿಳೆಯ ಮೇಲೆ ಚಲಿಸುತ್ತಿರುವ ರೈಲಿನಲ್ಲಿಯೇ ರೈಲ್ವೆ ಭೋಜನ ಗೃಹದ ಸಿಬ್ಬಂದಿಯೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. 
 
ಕಳೆದ ಜೂನ್ 10 ರಂದು ಮುಂಬೈನಿಂದ ಜೈಪುರ ನಗರಕ್ಕೆ ರೈಲಿನಲ್ಲಿ ತೆರಳುತ್ತಿದ್ದ ಮಹಿಳೆಗೆ ಸೀಟು ಕೊಡಿಸುವ ಆಮಿಷವೊಡ್ಡಿದ ಆರೋಪಿ ಆಕೆಯನ್ನು ರೈಲ್ವೆಯ ಪ್ಯಾಂಟ್ರಿ ವಿಭಾಗದ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.  
 
ಗಾಜಿಯಾಬಾದ್ ಮೂಲದ ವಿವಾಹಿತ ಮಹಿಳೆ ಪೊಲೀಸರಿಗೆ ದೂರು ನೀಡಿರುವ ಪ್ರಕಾರ, ಜೂನ್ 9 ರಂದು ಮಹಿಳೆ ಜೈಪುರಕ್ಕೆ ತೆರಳಲು ಬಾಂದ್ರಾದಿಂದ ಅರಾವಳ್ಳಿ ಎಕ್ಸ್‌ಪ್ರೆಸ್‌ ರೈಲು ಹತ್ತಿದ್ದಳು. ರಿಸರ್ವೇಶನ್ ಇರದ ಕಾರಣ ಜನರಲ್ ಕಂಪಾರ್ಟ‌್‌ಮೆಂಟ್‌ನಲ್ಲಿ ನಿಲ್ಲಬೇಕಾಗಿ ಬಂದಿತ್ತು. ಜನರಲ್ ಕಂಪಾರ್ಟ್‌ಮೆಂಟ್ ತುಂಬಿ ತುಳುಕುತ್ತಿದ್ದರಿಂದ ದೂರದ ಜೈಪುರಕ್ಕೆ ಇಂತಹ ಸ್ಥಿತಿಯಲ್ಲಿ ಹೋಗುವುದಾದರೂ ಹೇಗೆ ಎನ್ನುವ ಬಗ್ಗೆ ಆತಂಕಗೊಂಡಿದ್ದಳು ಎನ್ನಲಾಗಿದೆ.   
 
ರೈಲ್ವೆಯ ಭೋಜನಗೃಹದ ಸಿಬ್ಬಂದಿಯೊಬ್ಬನನ್ನು ಸಂಪರ್ಕಿಸಿ ಒಂದು ಸೀಟು ಕೊಡಿಸುವಂತೆ ಮಹಿಳೆ ಮನವಿ ಮಾಡಿದ್ದಾಳೆ. ಆತ ನೀಡಿದ ಭರವಸೆಯನ್ನು ನಂಬಿ ಬಂದಿದ್ದಾಳೆ. ನಂತರ ಮಹಿಳೆಯನ್ನು ಬೆದರಿಸಿದ ಆರೋಪಿ ಆಕೆಯನ್ನು ಭೋಜನಗೃಹದಲ್ಲಿರುವ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಯಾರಿಗಾದರೂ ಹೇಳಿದಲ್ಲಿ ರೈಲಿನಿಂದ ಹೊರಗೆ ಎಸೆಯುವುದಾಗಿ ಬೆದರಿಸಿದ್ದಾನೆ. ಜೈಪುರ ಬರುವವರೆಗೆ ಮೌನವಾಗಿದ್ದ ಮಹಿಳೆ, ನಂತರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ.
 
ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಗುರುತಿಸಲಾಗಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments