ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸಂಸದ ಶಾದಿ ಲಾಲ್ ಬಾತ್ರಾ (76) ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಬಾತ್ರಾ ಅವರ ವಿರುದ್ಧ ಹರಿಯಾಣಾ ಮೂಲದ ವೃತ್ತಿಯಲ್ಲಿ ವಕೀಲೆಯಾಗಿರುವ ಯುವತಿಯೋರ್ವಳು ಸಂಸದರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ನವದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕೆಲಸವನ್ನು ಕೊಡಿಸುವುದಾಗಿ ಸೆಪ್ಟೆಂಬರ್ 24 ರಂದು ಗಾಜಿಯಾಬಾದ್ನ ಇಂದಿರಾಪುರಮ್ದಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡ ಬಾತ್ರಾ ಮತ್ತು ತರಿಸುವ ಪಾನೀಯವನ್ನು ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಕೀಲೆ ದೂರಿದ್ದಾಳೆ.
ಪಕ್ಷದಲ್ಲಿ ತಾವು ವರ್ಚಸ್ವಿ ನಾಯಕರಾಗಿದ್ದು ನಿನಗೆ ಕೆಲಸ ಕೊಡಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದರು ಎಂದು ದೂರುದಾತೆ ಆರೋಪಿಸಿದ್ದಾಳೆ.
ಪೊಲೀಸರಲ್ಲಿ ದೂರು ನೀಡಬೇಡ ಎಂದು ಅವರು ಬೆದರಿಕೆ ಹಾಕಿದ್ದರು ಎಂದಾಕೆ ದೂರಿದ್ದಾಳೆ.