ನವದೆಹಲಿ: ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್ ಮಿಶ್ರಿ ಅವರನ್ನು ಜೂನ್ 28 ರಂದು ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 1989 ರ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾದ ಮಿಶ್ರಿ ಅವರು ಜುಲೈ 15 ರಿಂದ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಾರೆ.
ಭಾರತವು ವಿವಿಧ ವಿದೇಶಾಂಗ ನೀತಿ ಸವಾಲುಗಳನ್ನು ನ್ಯಾವಿಗೇಟ್ ಮಾಡಿದ ಅವರ ಕಾರ್ಯವೈಖರಿ ಮೇಲೆ ಅವರನ್ನು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಅವರು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಳ್ಳುವ ಮೊದಲು, ಮಿಸ್ರಿ ಅವರು 2019-2021 ರಿಂದ ಚೀನಾಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
ಮಿಶ್ರಿ ಅವರು ರಾಜತಾಂತ್ರಿಕತೆಯಲ್ಲಿ ಭಾರೀ ಅನುಭವನ್ನು ಹೊಂದಿದ್ದಾರೆ. ವಿಶೇಷ ಏನೆಂದರೆ ಮಿಶ್ರಿ ಅವರು ಮೂವರು ಪ್ರಧಾನ ಮಂತ್ರಿಗಳ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅಪರೂಪದ ಹಿರಿಮೆಯನ್ನು ಹೊಂದಿದ್ದಾರೆ.
ಚೀನಾದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾಗಿದ್ದರು. ಜನವರಿ 2022 ರಲ್ಲಿ, ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಗೆ ನೇಮಿಸಲಾಯಿತು.
ಪೂರ್ವ ಲಡಾಖ್‌ನಲ್ಲಿ 2020 ರ ಬಿಕ್ಕಟ್ಟಿನ ನಂತರ ಗಮನಾರ್ಹವಾಗಿ ಭುಗಿಲೆದ್ದ ಉದ್ವಿಗ್ನತೆ ಮತ್ತು ನಂತರದ ಭಾರತ ಮತ್ತು ಚೀನಾ ಪಡೆಗಳ ನಡುವಿನ ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ 59 ವರ್ಷದ ಮಿಸ್ರಿ ಭಾರತ ಮತ್ತು ಚೀನಾ ನಡುವಿನ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.<>