ಶೀಘ್ರದಲ್ಲಿಯೇ ನಮ್ಮ ಬ್ಯಾಂಕ್‌ಗಳ ಎಟಿಎಂಗಳಲ್ಲಿ 20 ಮತ್ತು 50ರೂಪಾಯಿ ಮುಖಬೆಲೆಯ ನೋಟುಗಳು ಲಭ್ಯವಾಗಲಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
500 ಹಾಗೂ 1,000 ರೂಪಾಯಿ ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ತಹಬಂದಿಗೆ ತರುವ , ಜನರು ಎದುರಿಸುತ್ತಿರುವ ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ನಮ್ಮ ಬ್ಯಾಂಕ್ ಎಟಿಎಂಗಳಲ್ಲಿ ಶೀಘ್ರವೇ 20 ಹಾಗೂ 50 ರೂಪಾಯಿಗಳ ನೋಟುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ ಭಟ್ಟಾಚಾರ್ಯ.
ನೋಟು ನಿಷೇಧದ ಬಳಿಕ ಚಿಲ್ಲರೆ ಸಮಸ್ಯೆ ಜನರನ್ನು ಕಾಡುತ್ತಿದೆ. ಇಂತವರಿಗೆ ಸಹಾಯವಾಗಲೆಂದು ನಾವು ಕಡಿಮೆ ಮೊತ್ತದ ನೋಟುಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಈ ಬಿಕ್ಕಟ್ಟುಗಳೆಲ್ಲ ಪರಿಹಾರವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ