Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕತ್ತಲು ಮುಕ್ತ ಭಾರತ ನಿರ್ಮಾಣದ ಮೋದಿಯ ಕನಸು ಆಗಲಿದೆಯಾ ನನಸು?

ಕತ್ತಲು ಮುಕ್ತ ಭಾರತ ನಿರ್ಮಾಣದ ಮೋದಿಯ ಕನಸು ಆಗಲಿದೆಯಾ ನನಸು?

ramkrishna puranik

ನವದೆಹಲಿ , ಮಂಗಳವಾರ, 2 ಜನವರಿ 2018 (16:08 IST)
ಪ್ರಧಾನಿ ನರೇಂದ್ರ ಮೋದಿಯವರ ಕತ್ತಲು ಮುಕ್ತ ಭಾರತದ ನಿರ್ಮಾಣವು 2019 ರ ಮಾರ್ಚನಲ್ಲಿ ಈಡೇರಲಿದೆ. ಭಾರತ ನಿರಂತರ ವಿದ್ಯುತ್ತನ್ನು ಪಡೆಯಲಿದೆ.
ಗುರುವಾರ ಲೋಕಸಭೆಯಲ್ಲಿ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಪ್ರಧಾನಿಯ ಕನಸಾದ ಕತ್ತಲು ಮುಕ್ತ ಭಾರತವು 2019 ರ ಮಾರ್ಚ್ ಹೊತ್ತಿಗೆ ಸಾಕಾರಗೊಳ್ಳಲಿದ್ದು ಸಂಪೂರ್ಣ ಭಾರತ ದೇಶವು 24 ಗಂಟೆಗಳ ನಿರಂತರವಾದ ವಿದ್ಯುತ್ತನ್ನು ಪಡೆಯಲಿದೆ ಎಂದು ಹೇಳಿದರು.
 
ಭಾರತದ 1694 ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಿಲ್ಲ, ಮೊದಲು ಈ ಗ್ರಾಮಗಳಿಗೆ 2018 ರ ಡಿಸೆಂಬರ್ ಒಳಗಾಗಿ ವಿದ್ಯುತ್ ಕಲ್ಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. 2019 ರ ಹೊತ್ತಿಗೆ ನಿರಂತರ ವಿದ್ಯುತ್ ಪೂರೈಕೆಯಾಗದಿದ್ದರೆ ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ದಂಡ ವಿದಿಸುವುದಷ್ಟೇ ಅಲ್ಲದೇ, ಇದಕ್ಕಾಗಿ ಹೊಸ ಕಾನೂನುಗಳನ್ನು ರಚಿಸಲಾಗುವುದು. ತಾಂತ್ರಿಕ ತೊಂದರೆಗಳಿದ್ದಾಗ ಮಾತ್ರ ವಿದ್ಯುತ್ ಪೊರೈಕೆಯನ್ನು ಕಡಿತಗೊಳಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
 
ಪ್ರಧಾನಿ ಮೋದಿ ಅವರು 2022 ರಲ್ಲಿ ಭಾರತದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಪೂರೈಸುವುದಾಗಿ 2015 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂರು ತಮ್ಮ ಪ್ರಾಬಲ್ಯ ಸ್ಥಾಪಿಸಲು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ; ವಿವಾದ ಸೃಷ್ಟಿಸಿದ ಸಿಂಘಾಲ್ ಪೋಸ್ಟ್