ಕೋಲ್ಕತ್ತಾ: ಮದುವೆಯಾಗಿ ಮೂರು ದಿನ ಕಳೆದರೂ ಪತಿಯ ಈ ನಡವಳಿಕೆಯಲ್ಲಿ ಬದಲಾವಣೆ ಕಾಣಲಿಲ್ಲವೆಂದು ಪತ್ನಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕಳೆದ ವಾರ ಮದುವೆಯಾದ ದಂಪತಿಗೆ ಮೊದಲ ರಾತ್ರಿಯ ಶಾಸ್ತ್ರ ಏರ್ಪಡಿಸಲಾಗಿತ್ತು. ಆದರೆ ರೂಮಿಗೆ ಬಂದ ವಧುವಿನ ಜೊತೆ ವರ ಸಂಸಾರ ಶುರು ಮಾಡದೆ ನಿದ್ರೆ ಮಾಡುತ್ತಿದ್ದನಂತೆ. ಮೂರು ರಾತ್ರಿ ಹೀಗೆ ಕಳೆದರೂ ತನ್ನ ಪತಿಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.
ಇದರಿಂದ ಬೇಸರಗೊಂಡ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.