ನವದೆಹಲಿ: ಒಂದು ಕಡೆ ಸುಪ್ರೀಂ ಕೋರ್ಟ್ ನಲ್ಲಿ ತ್ರಿವಳಿ ತಲಾಖ್ ನಿಷೇಧ ಕುರಿತಂತೆ ಚರ್ಚೆಗಳಾಗುತ್ತಿದ್ದರೆ, ಉತ್ತರಪ್ರದೇಶದಲ್ಲೊಬ್ಬಳು ಮುಸ್ಲಿಂ ಮಹಿಳೆ ತನ್ನ ಪತಿಗೇ ತಲಾಖ್ ನೀಡಿದ್ದಾಳೆ.
ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಮತ್ತು ಹೆಣ್ಣು ಮಗುವೆಂಬ ಕಾರಣಕ್ಕೆ ಪುತ್ರಿಗೆ ಕಾಟ ಕೊಡುತ್ತಿದ್ದ ಎಂಬ ಕಾರಣಕ್ಕೆ ಈ ದಿಟ್ಟ ಮಹಿಳೆ ಈ ನಿರ್ಧಾರಕ್ಕೆ ಬಂದಿದ್ದಾಳೆ. ಆರು ವರ್ಷಗಳ ಹಿಂದೆ ಈಕೆಗೆ ವಿವಾಹವಾಗಿತ್ತು.
ಅಂದಿನಿಂದಲೂ ಆಕೆಯ ಅತ್ತೆ-ಮಾವ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಂತೆ. ಆಕೆ ಹೆಣ್ಣು ಮಗುವಿಗೆ ಜನ್ಮವಿತ್ತ ನಂತರ ಕಿರುಕುಳ ಜಾಸ್ತಿಯಾಗಿತ್ತು. ಅದರ ಜತೆಗೆ ಪತಿ ದೈಹಿಕ ಹಿಂಸೆ ನೀಡುತ್ತಿದ್ದ. ಇದೆಲ್ಲದರಿಂದ ಬೇಸತ್ತ ಆಕೆ ತವರು ಮನೆಗೆ ವಾಪಸಾಗಿದ್ದಳು.
ಅಲ್ಲದೆ ಕೌಟುಂಬಿಕ ದೌರ್ಜನ್ಯದಡಿ ಗಂಡನ ಮನೆಯವರ ವಿರುದ್ಧ ದೂರೂ ದಾಖಲಿಸದ್ದಾಳೆ. ಇನ್ನೀಗ ಕಾನೂನು ಪ್ರಕಾರ ವಿಚ್ಛೇದನ ಸಿಗುವುದೊಂದೇ ಬಾಕಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ