ನವದೆಹಲಿ : ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ದೂರಿನ ಪ್ರತಿಯನ್ನು ರಮ್ಯಾ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು, ಬಿಜೆಪಿ `ಮೈ ಫಸ್ಟ್ ವೋಟ್ ಫಾರ್ ಮೋದಿ' ಎಂಬ ಫೇಸ್ ಬುಕ್ ಖಾತೆಯ ಮೂಲಕ ಮತದಾರರನ್ನು ಓಲೈಸುತ್ತಿದೆ. ಬ್ಯಾಡ್ಜ್, ಬ್ಯಾಗ್ಸ್ ಟೀ ಶರ್ಟ್, ಫೋನ್ ಕವರ್ಸ್ ಹಾಗೂ ಟೋಪಿಗಳನ್ನು ಉಚಿತ ಉಡುಗೊರೆಗಾಗಿ ಮೋದಿಗೆ ವೋಟ್ ಮಾಡಿ ಎಂದು ಆಮಿಷವೊಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಬಿಜೆಪಿ ಪ್ರಚಾರಕ್ಕಾಗಿ ಫೇಸ್ ಬುಕ್ ಪೇಜ್ ಗಳನ್ನು ಹಾಗೂ ವೆಬ್ ಸೈಟ್ ಗಳ ವಿರುದ್ಧ ತಕ್ಷಣದಿಂದಲೇ ಕ್ರಮಕೈಗೊಳ್ಳಿ ಎಂದು ರಮ್ಮಾ ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.