ನವದೆಹಲಿ: ಪ್ರಧಾನಿ ಮೋದಿ ಇನ್ನು ತಾವು ಭಾಗವಹಿಸುವ ಸಭೆಗಳಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಹುಕುಂ ಹೊರಡಿಸಿದ್ದಾರೆ. ಅದಕ್ಕೊಂದು ಕಾರಣವೂ ಇದೆ.
ಸಭೆ ನಡೆಯುತ್ತಿದ್ದರೆ ಅಧಿಕಾರಿಗಳು, ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಹೆಚ್ಚು, ಮೊಬೈಲ್ ಫೋನ್ ಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಮೀಟಿಂಗ್ ಕಡೆಗೆ ಗಮನವೇ ಇರುವುದಿಲ್ಲ ಎನ್ನುವುದು ಅವರ ಆರೋಪ.
ಹಿಗಾಗಿ ಮೀಟಿಂಗ್ ನಡೆಯುವ ಸ್ಥಳಕ್ಕೆ ಮೊಬೈಲ್ ಫೋನ್ ಕೊಂಡೊಯ್ಯಬಾರದು ಎಂದು ಸೂಚಿಸಿದ್ದೇನೆ. ಸಾಮಾಜಿಕ ಜಾಲತಾಣಗಳು, ನಮ್ಮ ಬದುಕಿಗೆ ಒಳಿತು ಮಾಡುವಂತಿರಬೇಕೇ ಹೊರತು. ಸಮಾಜಕ್ಕೆ ಒಳಿತು ಮಾಡುವಂತಹ ನಿರ್ಧಾರ ಕೈಗೊಳ್ಳುವ ಸ್ಥಳಗಳಲ್ಲಿ ಅಡ್ಡಿಪಡಿಸುವಂತಿರಬಾರದು ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ