ನವದೆಹಲಿ: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೆಚ್ಚು ಮಾತನಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ಟೀಕೆಗೊಳಗಾಗಿದ್ದರು. ಆದರೆ ಅವರು ಮೌನವಾಗಿದ್ದದ್ದು ಯಾಕೆ?
ಇದರ ಬಗ್ಗೆ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿಕೊಂಡಿದ್ದಾರೆ. “ಮನಮೋಹನ್ ಸಿಂಗ್ ಎರಡನೇ ಅವಧಿಗೆ ಪ್ರಧಾನಿಯಾದಾಗ ಹೆಚ್ಚು ಮಾತನಾಡಬಾರದು ಎಂದು ತೀರ್ಮಾನಿಸಿದ್ದರು. ಆದರೆ ಅದರ ಹಿಂದಿರುವ ನಿಜವಾದ ಕಾರಣ ಏನೆಂದು ಹೇಳುತ್ತಿರಲಿಲ್ಲ. ಹಾಗಂತ ಅವರು ದುರ್ಬಲ ಪ್ರಧಾನಿ ಅಲ್ಲ” ಎಂದು ಮನೀಶ್ ತಿವಾರಿ ಹೇಳಿಕೊಂಡಿದ್ದಾರೆ.
“ಅವರು ದುರ್ಬಲರಾಗಿದ್ದರೆ, ಅಣು ಒಪ್ಪಂದದಂತಹ ಮಹತ್ವದ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ. ಆದರೂ ಎರಡನೇ ಅವಧಿಯಲ್ಲಿ ಹೆಚ್ಚು ಮಾತನಾಡದೇ ಇರುವುದೇ ಜಾಣತನ ಎಂದು ತೀರ್ಮಾನಿಸಿದ್ದರು” ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ