ನವದೆಹಲಿ: ಗುಜರಾತ್ ನಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ. ಅಲ್ಲಿ ಅಹಮ್ಮದ್ ಪಟೇಲ್ ಗೆಲುವಿಗೆ ಕಾಂಗ್ರೆಸ್ ಯಾಕೆ ಅಷ್ಟೊಂದು ತಲೆಕೆಡಿಸಿಕೊಂಡಿದೆ.
ಒಂದು ಪ್ರಧಾನಿ ಮೋದಿ ತವರಿನಲ್ಲಿ ಗೆದ್ದು, ಕೇಂದ್ರಕ್ಕೆ ಮುಖಭಂಗ ಮಾಡುವುದು. ಇನ್ನೊಂದು ಅಹಮ್ಮದ್ ಪಟೇಲ್ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ನಿಕಟವರ್ತಿಯಾಗಿರುವುದರಿಂದ ಈ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಟೇಲ್ ಸೋನಿಯಾ ಗಾಂಧಿಗೂ ಕಾರ್ಯದರ್ಶಿಯಾಗಿ ಕಾಂಗ್ರೆಸ್ ನ ನಿಷ್ಠಾವಂತ ಎಂದು ಸಾಬೀತುಪಡಿಸಿದವರು. ರಾಜೀವ್ ಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿರುವ ಪಟೇಲ್ ಒಂದು ವೇಳೆ ಸೋತರೆ ಅದು ಸೋನಿಯಾ ಗಾಂಧಿ ಸೋಲು ಎಂದೇ ವಿಶ್ಲೇಷಿಸಲಾಗಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಅಹಮ್ಮದ್ ಪಟೇಲ್ ಗೆಲುವಿಗೆ ಅವಿರತ ಶ್ರಮಿಸುತ್ತಿದೆ.