ಜಮ್ಮು: ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮನೆಗೆ ಆಪರಿಚಿತನೊಬ್ಬ ನುಗ್ಗಲು ಯತ್ನಿಸಿದ್ದು , ಆತನನ್ನು ಭದ್ರತಾ ಸಿಬ್ಬಂದಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಅಪರಿಚತನು ಮುಖ್ಯ ಗೇಟ್ ಉಲ್ಲಂಘನೆ ಮಾಡಿ ಒಳ ನುಗ್ಗಿದ್ದಾನೆ. ಭದ್ರತಾ ಸಿಬ್ಬಂದಿಗಳೊಂದಿಗೆ ಹೊಡೆದಾಟ ಕೂಡ ನಡೆಸಿದ್ದಾನೆ. ಕೂಡಲೇ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ಎಸ್‌ಎಸ್‌ಪಿ ವಿವೇಕ್ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಉಗ್ರ ದಾಳಿ ಎಂದು ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹತ್ಯೆಗೀಡಾದ ವ್ಯಕ್ತಿ ಪೂಂಚ್‌ನ ನಿವಾಸಿ ಮುರ್ಫಾಸ್ ಶಾ ಎನ್ನುವವನಾಗಿದ್ದು, ಈತ ಎಸ್‌ಯುವಿ ಕಾರಿನಲ್ಲಿ ಮುಖ್ಯ ವಿಐಪಿ ಗೇಟ್ ದಾಟಿ ಮನೆಯ ಬಾಗಿಲಿಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ನನ್ನ ಮಗನನ್ನು ಬಂಧಿಸಬಹುದಿತ್ತು. ಗುಂಡಿಕ್ಕಿ ಹತ್ಯೆ ಮಾಡಿದ್ದೇಕೆ? ಭದ್ರತಾ ಸಿಬ್ಬಂದಿ ಗೇಟ್‌ನಲ್ಲಿ ಇದ್ದಿದ್ದರೆ ನನ್ನ ಮಗ ಒಳಗೆ ಹೇಗೆ ಹೋಗುತ್ತಿದ್ದ. ಭದ್ರತೆಯ ಲೋಪ ಎದ್ದು ಕಾಣುತ್ತಿದೆ . ದಿನ ಅವನು ಜಿಮ್‌ಗೆ ಹೋಗುತ್ತಿದ್ದ. ಇಂದೂ ಕೂಡ ಹೋಗಿದ್ದಾನೆ. ಆತನನ್ನು ಹತ್ಯೆಮಾಡಿದ್ದೇಕೆ ಎಂದು ಮಾಧ್ಯಮದವರ ಬಳಿ ಮುರ್ಫಾಸ್ ತಂದೆ ನೋವು ತೋಡಿಕೊಂಡಿದ್ದಾರೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ