ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಅಶುತೋಷ್ ಅವರಿಗೆ ದೆಹಲಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 10ಸಾವಿರ ರೂಪಾಯಿ ದಂಡ ವಿಧಿಸಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ಜೇಟ್ಲಿ ಅವರು ಭ್ರಷ್ಟಾಚಾರ ಎಸಗಿರುವುದಾಗಿ ಅಶುತೋಷ್ ಹಾಗೂ ‘ಆಪ್’ನ ಇತರ ಮುಖಂಡರು ಹೇಳಿದ್ದರು. ಇದರ ಕುರಿತು ಜೇಟ್ಲಿ, ಕೋರ್ಟ್‌ನಲ್ಲಿ 2015ರಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.. ಈ ಅರ್ಜಿಯನ್ನು ಹಿಂದಿಯಲ್ಲಿ ತರ್ಜುಮೆ ಮಾಡುವಂತೆ ಜೇಟ್ಲಿ ಅವರಿಗೆ ಆದೇಶಿಸಬೇಕು ಎಂದು ಅಶುತೋಷ್ ಕೋರ್ಟ್‌ಗೆ ಮನವಿ ಮಾಡಿದ್ದರು.
ಆದರೆ ಕೋರ್ಟ್ ಈ ಮನವಿಯನ್ನು ವಜಾ ಮಾಡಿದೆ. ‘ಅರ್ಜಿದಾರರಿಗೆ (ಅಶುತೋಷ್) ಅಥವಾ ಅವರ ಪರ ವಕೀಲರಿಗೆ ಇಂಗ್ಲಿಷ್ ಬಾರದ ಭಾಷೆಯೇನಲ್ಲ. ಸುಮ್ಮನೇ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲು ಈ ಅರ್ಜಿ ಸಲ್ಲಿಸಲಾಗಿದೆ’ ಎಂದು ಕೋರ್ಟ್ ದಂಡ ವಿಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ