ಗೋಮಾಂಸ ಸೇವನೆಯನ್ನು ಏಕೆ ಅಪರಾಧೀಕರಣಗೊಳಿಸುತ್ತೀರಿ? ಎಂದು ದೆಹಲಿ ಹೈಕೋರ್ಟ್ ಬುಧವಾರ ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ.
ಈ ಕುರಿತು ಡಿಸೆಂಬರ್ 8ರೊಳಗೆ ಪ್ರತಿಕ್ರಿಯಿಸುವಂತೆ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ಸಂಗೀತಾ ಸೆಹಗಲ್ ಅವರನ್ನೊಳಗೊಂಡ ಪೀಠ ಆಮ್ ಆದ್ಮಿ ಸರ್ಕಾರಕ್ಕೆ ಸೂಚಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದು ಮೇ 4 ರಂದು ಈ ಕುರಿತು ಅರ್ಜಿ ಸಲ್ಲಿಸಿತ್ತು.
ತಿನ್ನುವ ಹಕ್ಕು ಅವರವರ ಆಯ್ಕೆಗೆ ಬಿಟ್ಟಿದ್ದು. ಇದು ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕಿನ ಅವಿಭಾಜ್ಯ ಅಂಗ, ಎಂದು ಎನ್‌ಜಿಓ ಅರ್ಜಿಯಲ್ಲಿ ಹೇಳಿತ್ತು.
ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಇತರರ ಮೇಲೆ ಹೇರಿ ಕಾನೂನಾಗಿಸದಂತೆ ಸಂವಿಧಾನ ರಾಜ್ಯಕ್ಕೆ ಆದೇಶಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.