ಚೆನ್ನೈ: ಜಯಲಲಿತಾ ಸಾವಿನ ಕುರಿತಾದ ರಹಸ್ಯದ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದ ಒ ಪನೀರ್ ಸೆಲ್ವಂ ಉಪ ಮುಖ್ಯಮಂತ್ರಿಯಾದ ನಂತರ ಮೌನವಾಗಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಸಿಎಂ ಪನೀರ್ ಸೆಲ್ವಂ ಈಗ ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸಲು ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
‘ಈಗಿನ ಮುಖ್ಯಮಂತ್ರಿ ಅಂದು ಜಯಲಲಿತಾರನ್ನು ಭೇಟಿಯಾಗಿದ್ದರೇ ಎಂದು ನಮಗೆ ಸ್ಪಷ್ಟತೆಯಿಲ್ಲ. ಅಂದು ಇದೇ ಪಳನಿಸ್ವಾಮಿ ಜಯಲಲಿತಾ ಸಂಪುಟದ ಪ್ರಮುಖ ಸಚಿವರಾಗಿದ್ದರು. ಹೀಗಾಗಿ ಸಿಎಂ ಮತ್ತು ಡಿಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಡೆದಿದ್ದೇನೆಂದು ಯಾಕೆ ಬಾಯಿ ಬಿಡುತ್ತಿಲ್ಲ ಎಂದೇ ನನಗೆ ಗೊತ್ತಾಗುತ್ತಿಲ್ಲ’ ಎಂದು ರಾಜ್ಯ ಕಾಂಗ್ರೆಸ್ ವರಿಷ್ಠ ತಿರುವನಕ್ಕಾರಸರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ