Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಯಾರಾಗ್ತರೆ ಸಿಎಂ..?

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಯಾರಾಗ್ತರೆ ಸಿಎಂ..?
ಲಖನೌ , ಶನಿವಾರ, 11 ಮಾರ್ಚ್ 2017 (11:03 IST)
ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಬಹುಮತದತ್ತ ಮುನ್ನುಗ್ಗುತ್ತಿದೆ. 300ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ. ಈ ಮಧ್ಯೆ, ಜನರಲ್ಲಿ ಸಿಎಂ ಯಾರಾಗಬಹುದೆಂಬ ಚರ್ಚೆ ಶುರುವಾಗಿದೆ.

ರಾಜನಾಥ್ ಸಿಂಗ್: ಬಿಜೆಪಿ ಆಡಳಿತಾವಧಿಯಲ್ಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಿಎಂ ರೇಸ್`ನಲ್ಲಿದ್ದಾರೆ. ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳನ್ನ ಕರೆತಂದು ಉಪಿಯಲ್ಲಿ ದೊಡ್ಡ ಪ್ರಚಾರ ನಡೆಸಿದ್ದರು. ನಿಶ್ಚಿತವಾಗಿ ಯುಪಿ ಸಿಎಂ ರೇಸ್`ನಲ್ಲಿ ರಾಜನಾಥ್ ಸಿಂಗ್ ಇದ್ದಾರೆ.

ಕೇಶವ್ ಪ್ರಸಾದ್ ಮೌರ್ಯ:  ಉತ್ತರಪ್ರದೇಶದಲ್ಲಿ ಬಿಜೆಪಿಯ ಓಬಿಸಿ ಫೇಸ್ ಆಗಿರುವ ಮೌರ್ಯ ಸಿಎಂ ರೇಸ್`ನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಕಲ್ಯಾಣ್ ಸಿಂಗ್ ಬಳಿಕ ಹಿಂದುಳಿದ ವರ್ಗವನ್ನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೌರ್ಯ, ಈ ಬಾರಿಯ ಚುನಾವಣೆಯಲ್ಲೂ ಬೇರು ಮಟ್ಟದಿಂದ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕೇಶವ್ ಪ್ರಸಾದ್ ಸಿಎಂ ರೇಸ್`ನ ಪ್ರಮುಖರಲ್ಲೊಬ್ಬರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಅಖಿಲೇಶ್ ಯಾದವ್