Webdunia - Bharat's app for daily news and videos

Install App

ಶೌರ್ಯಚಕ್ರ ವಿಜೇತ ಯಾರು ಗೊತ್ತ?

Webdunia
ಗುರುವಾರ, 9 ಡಿಸೆಂಬರ್ 2021 (10:19 IST)
ಹೊಸದಿಲ್ಲಿ : 2020ರ ಅಕ್ಟೋಬರ್ 12ರಂದು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಪರೀಕ್ಷಾರ್ಥ ಹಾರಾಟದ ವೇಳೆ ತುರ್ತು ಭೂಸ್ಪರ್ಶದ ಅಪಾಯದಲ್ಲಿದ್ದ ಎಲ್ಸಿಎ ತೇಜಸ್ ಯುದ್ಧ ವಿಮಾನ,

ಬಹಳ ಚಾಣಾಕ್ಷತೆಯಿಂದ ಉಳಿಸಿದ ಸಾಹಸಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಶೌರ್ಯ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ದುರಂತದಲ್ಲಿ ಬದುಕುಳಿದಿದ್ದಾರೆ. ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರುಣ್ ಅಪಾರ ಕೌಶಲವಿರುವ ಪೈಲಟ್ ಮಾತ್ರವಲ್ಲ, ಪ್ರತಿಕೂಲ ಪರಿಸ್ಥಿತಿಯಲ್ಲೂ ಕ್ಷಮತೆಯನ್ನು ಕಾಯ್ದುಕೊಳ್ಳಬಲ್ಲ ಶಕ್ತಿ ಇರುವ ವ್ಯಕ್ತಿ. ಇದನ್ನು ರಕ್ಷಣಾ ಸಚಿವಾಲಯ ಗುರುತಿಸಿತ್ತು. ಅವರಿಗೆ ಶೌರ್ಯ ಪ್ರಶಸ್ತಿ ನೀಡುವಾಗ ಈ ಅಂಶಗಳನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು.
ಅವರು ವೈಫಲ್ಯವನ್ನು ಸರಿಯಾಗಿ ಗುರುತಿಸಿದರು ಮತ್ತು ಕಡಿಮೆ ಎತ್ತರಕ್ಕೆ ಇಳಿಯಲು ಪ್ರಾರಂಭಿಸಿದರು. ಅವರೋಹಣ ಮಾಡುವಾಗ, ಫ್ಲೈಟ್ ಕಂಟ್ರೋಲ್ ಸಿಸ್ಟಮ್ ವಿಫಲವಾಯಿತು ಮತ್ತು ವಿಮಾನವು ಸಂಪೂರ್ಣ ನಿಯಂತ್ರಣದಿಂದ ದೂರವಾಯಿತು.
ಆದರೂ ಎದೆಗುಂದದೆ ವಿಮಾನವನ್ನು ಇಳಿಸಿದ್ದರು. ಉನ್ನತ ಮಟ್ಟದ ವೃತ್ತಿಪರತೆ, ಸಂಯಮ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವುದು, ತಮ್ಮ ಜೀವ ಅಪಾಯದಲ್ಲಿದ್ದರೂ ಎದೆಗುಂದದೆ ಸ್ವರಕ್ಷಣೆ ಮತ್ತು ವಿಮಾನದ ರಕ್ಷಣೆ ಮಾಡುವುದು, ಅದು ಬಿದ್ದರೆ ಆ ಸ್ಥಳದಲ್ಲಿ ಉಂಟಾಗುವ ಭಾರಿ ಅನಾಹುತವನ್ನು ತಪ್ಪಿಸಿ ಶೌರ್ಯ ಮೆರೆದಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments