ಚೆನ್ನೈ: ಜಯಲಲಿತಾ ಅಂತಿಮ ದಿನಗಳಲ್ಲಿ ಅವರ ಜತೆಗಿದ್ದವರು ಶಶಿಕಲಾ ನಟರಾಜನ್. ಚಿನ್ನಮ್ಮ ಬೇರೆ ಯಾರಿಗೂ ಅಮ್ಮನನ್ನು ನೋಡಲು ಅವಕಾಶ ನೀಡುತ್ತಿರಲಿಲ್ಲ ಎಂಬ ಆರೋಪಗಳಿವೆ. ಜಯಲಲಿತಾ ಸಾಯುವ ಮೊದಲು ಕೊನೆಯದಾಗಿ ಹೇಳಿದ ಮಾತೇನೆಂದು ಶಶಿಕಲಾ ಬಹಿರಂಗಪಡಿಸಿದ್ದಾರೆ.
ಇಹಲೋಕ ತ್ಯಜಿಸುವ ಮೊದಲು ಅಮ್ಮ ನನ್ನಲ್ಲಿ ಕೊನೆಯದಾಗಿ ಹೇಳಿದ ಮಾತೆಂದರೆ “ನಮ್ಮ ಪಕ್ಷವನ್ನು ಯಾರಿಗೂ ಒಡೆಯಲು ಸಾಧ್ಯವಿಲ್ಲ” ಎಂದು. ಹಾಗಾಗಿ ಇದೇ ಅಮ್ಮನ ಸಮಾಧಿ ಮುಂದೆ ನಿಂತು ನಾವೆಲ್ಲರೂ ಅಮ್ಮನ ಮಾತನ್ನು ಉಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಬೇಕಿದೆ ಎಂದು ಚಿನ್ನಮ್ಮ ಹೇಳಿಕೊಂಡಿದ್ದಾರೆ.
ಅಮ್ಮ ನಮಗಾಗಿ ಎಐಎಡಿಎಂಕೆ ಪಕ್ಷವೆಂಬ ಸಂಪತ್ತು ಬಿಟ್ಟು ಹೋಗಿದ್ದಾರೆ. ಇದನ್ನು ಉಳಿಸಿಕೊಳ್ಳಲು ನಾನು ಜೀವ ಕೊಡಲೂ ಸಿದ್ಧ ಎಂದು ಘೋಷಿಸಿದ್ದಾರೆ. ಅಂತೂ ಶಾಸಕರ ಮುಂದೆ ಅಮ್ಮನ ಬಗ್ಗೆ ಭರ್ಜರಿಯಾಗಿ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ ಚಿನ್ನಮ್ಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ