ಡೆಹ್ರಾಡೂನ್ : ಕುಟುಂಬದವರ ಜೊತೆ ಜಗಳವಾಡಿ ಮನೆಯಿಂದ ಓಡಿಹೋದ ಯುವತಿಯ ಮೇಲೆ ಟ್ರಕ್ ಚಾಲಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಉತ್ತರಖಂಡ್ ನ ತೆಹ್ರಿ ಜಿಲ್ಲೆಯಲ್ಲಿ ನಡೆದಿದೆ.
ಮನೆಯವರ ಜೊತೆ ಜಗಳವಾಡಿದ 28 ವರ್ಷದ ಯುವತಿ ಕೋಪದಿಂದ ಮನೆಬಿಟ್ಟು ಹೋಗುತ್ತಿದ್ದಾಗ ಡ್ರಾಪ್ ಕೊಡುವುದಾಗಿ ಹೇಳಿ ಆಕೆಯನ್ನು ಹತ್ತಿಸಿಕೊಂಡ ಟ್ರಕ್ ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಅರ್ಧದಾರಿಯಲ್ಲಿ ಇಳಿಸಿ ಹೋಗಿದ್ದಾನೆ.
ಈ ಘಟನೆಯ ಬಗ್ಗೆ ಯುವತಿ ಕಂಡಿಸೌರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆಬಲೆಬೀಸಿದ್ದಾರೆ.