ರಾಂಚಿ : 15 ವರ್ಷದ ಆದಿವಾಸಿ ಹುಡುಗಿ ಮೇಲೆ 5 ಪುರುಷರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ಜಾರ್ಖಂಡ್ ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.
ಹುಡುಗಿ ತನ್ನ ಹಳ್ಳಿಯಿಂದ ಸುಮಾರು 12 ಕಿ.ಮೀ.ದೂರದಲ್ಲಿರುವ ಜಾತ್ರೆಗೆ ತೆರಳಿದ್ದಾಳೆ. ಅಲ್ಲಿಂದ ರಾತ್ರಿ 9.30ಕ್ಕೆ ಹುಡುಗಿ ನಾಲ್ವರು ಗಂಡುಮಕ್ಕಳ ಜೊತೆ ಮನೆಗೆ ತೆರಳುತ್ತಿದ್ದಾಗ 5 ಪುರುಷರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಹುಡುಗಿ ಅವರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಉಳಿದವರು ತಪ್ಪಿಸಿಕೊಂಡಿದ್ದಾರೆ. ಆ ವೇಳೆ ಅವರು ಇಂತಹ ಘೋರ ಕೃತ್ಯ ಎಸಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಪೊಲೀಸರು ಹುಡುಗಿಯನ್ನು ರಕ್ಷಿಸಲು ದಾಳಿ ನಡೆಸಿದ್ದಾರೆ. ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.