ನವದೆಹಲಿ : ಭಾರತ ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದು, ಆ ಮೂಲಕ ಭಾರತ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಭಾರತದ ಸಾರ್ವಭೌಮತ್ವ, ಭದ್ರತೆ ಕಾಪಾಡುವ, ಹಾಗೂ ದೇಶದ ಜನತೆಯ ಡಿಜಿಟಲ್ ಸೆಕ್ಯೂರಿಟಿ, ಪ್ರೈವೆಸಿ ಉದ್ದೇಶದಿಂದ ಟಿಕ್ ಟಾಕ್ ಸೇರಿ 59 ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದೇವೆ. ಆ ಮೂಲಕ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಲ್ಲದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಭಾರತ ಶಾಂತಿ ಬಯಸುತ್ತದೆ, ಆದರೆ ಯಾರಾದರೂ ಕೆಣಕಿದರೆ ತಕ್ಕ ಉತ್ತರ ಕೊಡದೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.