ನೋಟ್ ಬ್ಯಾನ್ ನಿರ್ಧಾರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗುತ್ತದೆ ಎಂಬುದು ಪ್ರತಿಪಕ್ಷಗಳ ನಿರೀಕ್ಷೆಯಾಗಿತ್ತು. ಆದರೆ, ಜನ ನರೇಂದ್ರಮೋದಿ ನಿರ್ಧಾರವನ್ನ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ ಸುದ್ದಿಗೋಷ್ಠಿಯ ಹೈಲೈಟ್ಸ್
- ಉತ್ತರಪ್ರದೇಶದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ
- ಪಂಜಾಬ್ ಸೋಲನ್ನ ಸಮಾಲೋಚನೆ ನಡೆಸುತ್ತೇವೆ., ಸೋಲಿನ ಕುರಿತು
- ದೇಶದ ಬಡವರ್ಗದ ಜನ ಬಿಜೆಪಿ ಜೊತೆಗಿದ್ದಾರೆ.
- ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಶ್ರಮಿಸಿದವರನ್ನ ಸಿಎಂ ಆಗಿ ಆಯ್ಕೆ
- ಉತ್ತರಪ್ರದೇಶದ ಮತದಾರರು ಹಿಂದೂ-ಮುಸ್ಲೀಂ ಭೇದವನ್ನ ಮೀರಿ ನಿಂತಿದ್ದಾರೆ
- ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಸಣ್ಣ ರೈತರಿಗೆ ಅನುಕೂಲವಾಗುವ ಯೋಜನೆ
- ಉತ್ತರಪ್ರದೇಶದ ಜನರ ತೀರ್ಪು ದೇಶಕ್ಕೆ ಹೊಸ ದಿಕ್ಸೂಚಿ
- ಸ್ವಾತಂತ್ರ ನಂತರದಲ್ಲಿ ನರೇಂದ್ರಮೋದಿ ಅತ್ಯಂತ ಪ್ರಭಾವಶಾಲಿ ನಾಯಕ
- ಬಿಜೆಪಿ ಗೆಲುವು ಜನರ ಮತ್ತು ನರೇಂದ್ರಮೋದಿಯ ನೀತಿಗಳ ಗೆಲುವು