Webdunia - Bharat's app for daily news and videos

Install App

ಬಿಜೆಪಿ 1 ತಿಂಗಳಲ್ಲಿ ಮಾಡುವ ವೆಚ್ಚಕ್ಕಿಂತ ಹೆಚ್ಚಿನ ಹಣದ ಮದ್ಯವನ್ನು ನಾವು ದಿನಾ ಸೇವಿಸುತ್ತೇವೆ: ರಾಜಭರ್

Webdunia
ಭಾನುವಾರ, 17 ಸೆಪ್ಟಂಬರ್ 2017 (16:46 IST)
ಉತ್ತರಪ್ರದೇಶದಲ್ಲಿ ಬಿಜೆಪಿ ಒಂದು ತಿಂಗಳಿಗೆ ಎಷ್ಟು ಹಣ ವೆಚ್ಚ ಮಾಡುತ್ತದೆಯೋ ಅಷ್ಟು ಹಣವನ್ನು ನಮ್ಮ ಭಾಂಧವರು ಪ್ರತಿದಿನ ಮದ್ಯ ಸೇವಿಸುತ್ತಾರೆ ಎಂದು ಭಾರತೀಯ ಸಮಾಜ ಪಾರ್ಟಿ ಅಧ್ಯಕ್ಷ, ಸಿಎಂ ಯೋಗಿ ಸಂಪುಟದಲ್ಲಿ ಸಚಿವರಾಗಿರುವ ಓಂಪ್ರಕಾಶ್ ರಾಜಭರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.     

ಬಿಜೆಪಿ ಮಿತ್ರಪಕ್ಷವಾದ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥನೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಅಚ್ಚರಿ ಮೂಡಿಸಿದ್ದಾರೆ. 
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿರುವ ಓಂಪ್ರಕಾಶ್, ತಮ್ಮದೇ ಮಿತ್ರಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. 
 
ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಬಾರಿ ಪ್ರಧಾನಿ ಮೋದಿ ನನ್ನನ್ನು ಕರೆದು ಹಣವಿಲ್ಲದೇ ಪಕ್ಷ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ನಮ್ಮ ಬಳಿ ಹಣವಿಲ್ಲ. ಆದರೆ, ಉತ್ತರಪ್ರದೇಶದಲ್ಲಿ ಒಂದು ತಿಂಗಳಿಗೆ ನಿಮ್ಮ ಪಕ್ಷ ಎಷ್ಟು ಖರ್ಚು ಮಾಡುತ್ತದೆಯೋ ಅಷ್ಟು ಹಣದ ಮದ್ಯವನ್ನು ನಮ್ಮ ಸಮುದಾಯದವರು ಪ್ರತಿದಿನ ಸೇವಿಸುತ್ತಾರೆ ಎಂದು ಉತ್ತರ ನೀಡಿದ್ದೆ ಎಂದು ತಿಳಿಸಿದ್ದಾರೆ. 
 
ನಮ್ಮ ಪಕ್ಷದ ಚಿಹ್ನೆ ಹಳದಿ ಬಣ್ಣವಾಗಿದೆ. ಯಾರೂ ನಮ್ಮ ಮಾತು ಕೇಳುವದಿಲ್ಲವೋ ಅವರು ನಾವು ಶಿವನ ಭಕ್ತರು ಎನ್ನುವುದು ನೆನಪಿಡಬೇಕು. ನಾನು ಯಾರಿಗೆ ಶಾಪ ಕೊಟ್ಟರೆ ಪೊಲೀಯೋ ಆಗುತ್ತದೆ ಎಂದು ಭಾರತೀಯ ಸಮಾಜ ಪಾರ್ಟಿಯ ಅಧ್ಯಕ್ಷ ಓಂಪ್ರಕಾಶ್ ರಾಜಭರ್ ಅಬ್ಬರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments