ಭೋಪಾಲ್ : ಸಮುದ್ರದಲ್ಲಿ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರನ್ನು ಜನರಿಗೆ ಲೀಟರ್’ಗೆ 5 ಪೈಸೆಯಂತೆ ನೀಡಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬಂದ್ರಾಭನ್ ನಲ್ಲಿ ನದಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,’ ತಮಿಳುನಾಡಿ ಟುಟುಕಾರ್ ಪ್ರದೇಶದಲ್ಲಿ ಈಗಾಗಲೇ ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡುವ ಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗೇ ಇದೇವೇಳೆ ದೇಶ ಹಾಗೂ ರಾಜ್ಯದ ನೀರಿನ ಸಮಸ್ಯೆಯ ಕುರಿತು ಮಾತನಾಡಿದ ಅವರು,’ನದಿ ನೀರಿಗಾಗಿ ರಾಜ್ಯಗಳು ಕಿತ್ತಾಡುತ್ತಿವೆ. ಆದರೆ ಮೂರು ನದಿಗಳಿಂದ ಪಾಕಿಸ್ತಾನಕ್ಕೆ ನೀರು ಹರಿಯುತ್ತಿದೆ. ಈ ಬಗ್ಗೆ ಯಾವುದೇ ಸುದ್ದಿ ಪತ್ರಿಕೆ ಬರೆದಿಲ್ಲ, ಇದನ್ನು ನಿಲ್ಲಿಸುವಂತೆ ಯಾರೊಬ್ಬ ಶಾಸಕರೂ ಬಾಯ್ಬಿಟ್ಟು ಕೇಳುತ್ತಿಲ್ಲ’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ