Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕದಲ್ಲಿ ನೀರಿಲ್ಲ ನಮ್ಮಲ್ಲಿಗೆ ಬನ್ನಿ: ಐಟಿ ಕಂಪನಿಗಳಿಗೆ ಆಹ್ವಾನ ನೀಡಿದ ಕೇರಳ

Bengaluru Water crisis

Krishnaveni K

ತಿರುವನಂತಪುರಂ , ಗುರುವಾರ, 28 ಮಾರ್ಚ್ 2024 (10:54 IST)
ತಿರುವನಂತಪುರಂ: ಬೆಂಗಳೂರಿನಲ್ಲಿ ನೀರಿಲ್ಲದೇ ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ನೀಡುವ ಸ್ಥಿತಿಗೆ ಬಂದಿದೆ. ಇದನ್ನೇ ಕೇರಳ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ.

ಕರ್ನಾಟಕದಲ್ಲಿ ನೀರಿನ ಸಮಸ್ಯೆಯಿದೆ. ನಮ್ಮಲ್ಲಿ ನೀರಿನ ಸಮಸ್ಯೆಯಿಲ್ಲ. ಎಲ್ಲಾ ರೀತಿಯ ಸೌಲಭ್ಯ ನೀಡುತ್ತೇವೆ. ನಮ್ಮ ರಾಜ್ಯದಲ್ಲಿ ನಿಮ್ಮ ಕಂಪನಿ ಸ್ಥಾಪಿಸಿ ಎಂದು ಕರ್ನಾಟಕದಲ್ಲಿರುವ ಐಟಿ ಕಂಪನಿಗಳಿಗೆ ಕೇರಳ ಮುಕ್ತ ಆಹ್ವಾನ ನೀಡಿದೆ. ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವ ಪಿ. ರಾಜೀವ್ ಖುದ್ದಾಗಿ ಕರ್ನಾಟಕದಲ್ಲಿರುವ ಐಟಿ ಕಂಪನಿಗಳಿಗೆ ಪತ್ರ ಬರೆದು ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹಿಂದೆಂದೂ ಕಾಣದಂತಹ ಬರಗಾಲ ಎದುರಾಗಿದೆ. ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದೆ. ಬಹುತೇಕ ಐಟಿ ಕಂಪನಿಗಳು ನೌಕರರ ಅಗತ್ಯಕ್ಕೆ ನೀರು ಒದಗಿಸಲಾಗದೇ ವರ್ಕ್ ಫ್ರಂ ಹೋಂ ನೀಡುವ ಪರಿಸ್ಥಿತಿ ಬಂದಿದೆ.

ಈ ಹಿನ್ನಲೆಯಲ್ಲಿ ಐಟಿ ಕಂಪನಿಗಳಿಗೆ ಪತ್ರ ಬರೆದಿರುವ ಸಚಿವ ಪಿ. ರಾಜೀವ್, ಬೆಂಗಳೂರಿನಲ್ಲಿ ತೀವ್ರ ನೀರಿನ ಸಮಸ್ಯೆ ಕುರಿತು ವರದಿಗಳನ್ನು ನಾವು ನೋಡಿದ್ದೇವೆ. ನಮ್ಮಲ್ಲಿಗೆ ಬಂದರೆ ಎಲ್ಲಾ ಸೌಲಭ್ಯಗಳ ಜೊತೆ ನೀರೂ ಒದಗಿಸಿಕೊಡುತ್ತೇವೆ ಎಂದು ಆಹ್ವಾನ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆಗೆ ಯತ್ನಿಸಿದ ತಮಿಳುನಾಡು ಸಂಸದ ಗಣೇಶಮೂರ್ತಿ ಸಾವು