ನವದೆಹಲಿ: ಇದೇನಾಗಿ ಹೋಯ್ತು. ಇಷ್ಟು ಬೇಗ ಟೀಂ ಇಂಡಿಯಾ ಪ್ರದರ್ಶನ ವಿರಾಟ್ ಗೆ ಬೇಸರ ತಂದಿತಾ? ಇಷ್ಟು ಬೇಗ ನಿವೃತ್ತಿಯಾಗುತ್ತಾರಾ? ಹಾಗಂತ ಗಾಬರಿಯಾಗಬೇಡಿ. ನಿವೃತ್ತಿಯಾಗುತ್ತಿರುವರ ಹೆಸರು ವಿರಾಟ್ ನಿಜ. ಆದರೆ ಕೊಹ್ಲಿಯಲ್ಲ. ಐಎನ್ ಎಸ್ ವಿರಾಟ್ ಎಂಬ ನೌಕೆ.
ಭಾರತೀಯ ನೌಕಾ ಪಡೆಯ ಹೆಮ್ಮೆಯ ಯುದ್ಧ ನೌಕೆಯಾಗಿದ್ದ ಐಎನ್ ಎಸ್ ವಿರಾಟ್ ಆರು ದಶಕಗಳ ಸೇವೆ ಸಲ್ಲಿಸಿ ಇಂದಿಗೆ ತನ್ನ ವೃತ್ತಿ ಕೊನೆಗೊಳಿಸಲಿದೆ. ಅಂದರೆ ಇಂದಿನಿಂದ ವಿರಾಟ್ ಸೇವೆ ಸ್ಥಗಿತಗೊಳಿಸಲಿದೆ. ಇದನ್ನು ಇನ್ನು ಹರಾಜಿಗಿಡಲಾಗುವುದು. ನಾಲ್ಕು ತಿಂಗಳು ಕಾಲಾವಧಿಯಲ್ಲಿ ಯಾರೂ ಕೊಳ್ಳುವವರಿಲ್ಲದಿದ್ದರೆ, ನೌಕೆಯನ್ನು ಒಡೆದು ಅದರ ಭಾಗಗಳನ್ನು ಮಾರಲಾಗುವುದು ಎಂದು ನೌಕಾ ದಳದ ಮುಖ್ಯಸ್ಥ ಸುನಿಲ್ ಲಾಂಬ ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಸರ್ಕಾರ ಈ ಐತಿಹಾಸಿಕ ನೌಕೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವ ಬಯಕೆ ವ್ಯಕ್ತಪಡಿಸಿತ್ತು. ಆದರೆ ಇದಕ್ಕಾಗಿ ಸುಮಾರು 1000 ಕೋಟಿ ವೆಚ್ಚ ತಗಲಬಹುದಾಗಿದೆ. ಸದ್ಯ ಗುಜರಾತ್ ನ ಸಮುದ್ರ ವಲಯದಲ್ಲಿರುವ ವಿರಾಟ್ ಇನ್ನು ಮುಂದೆ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.