Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಗೆಲುವಿಗಾಗಿ ಕಮಲಾ ಹ್ಯಾರಿಸ್‌ ಪೂರ್ವಿಕರ ಊರಲ್ಲಿ ವಿಶೇಷ ಪೂಜೆ

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಗೆಲುವಿಗಾಗಿ ಕಮಲಾ ಹ್ಯಾರಿಸ್‌  ಪೂರ್ವಿಕರ ಊರಲ್ಲಿ ವಿಶೇಷ ಪೂಜೆ

Sampriya

ತಿರುವರೂರು , ಮಂಗಳವಾರ, 5 ನವೆಂಬರ್ 2024 (15:25 IST)
Photo Courtesy X
ತಿರುವರೂರು: ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಖಾಡದಲ್ಲಿರುವ ಕಮಲಾ ಹ್ಯಾರಿಸ್‌ ಗೆಲುವಿಗಾಗಿ  ತಿರುವರೂರು ಜಿಲ್ಲೆಯ ಕಮಲಾ ಹ್ಯಾರಿಸ್ ಅವರ ಪೂರ್ವಜರ ಗ್ರಾಮದಲ್ಲಿರುವ ಶ್ರೀ ಧರ್ಮ ಶಾಸ್ತಾ ಶ್ರೀ ಸೇವಕ ಪೆರುಮಾಳ್ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಶೇಷ ಪೂಜೆಯ ನಂತರ ಅರ್ಚಕರು ಭಕ್ತರಿಗೆ ಪ್ರಸಾದವನ್ನು ವಿತರಿಸಿದರು. ಇನ್ನೂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅಮೇರಿಕಾದಿಂದ ಕಮಲಾ ಹ್ಯಾರಿಸ್ ಬೆಂಬಲಿಗರು ಆಗಮಿಸಿದ್ದರು. ತುಳಸೇಂದ್ರಪುರಂ ಗ್ರಾಮವು ಕಮಲಾ ಹ್ಯಾರಿಸ್ ಅವರ ತಾಯಿಯ ಅಜ್ಜ ಪಿವಿ ಗೋಪಾಲನ್ ಅವರ ಜನ್ಮಸ್ಥಳವಾಗಿದೆ.

ನೆವಾಡಾದ ಲಾಸ್ ವೇಗಾಸ್‌ನಿಂದ ಎಎನ್‌ಐ ಜೊತೆ ಮಾತನಾಡಿದ ಶೆರಿನ್ ಶಿವಲಿಂಗ, "ಕಮಲಾ ಹ್ಯಾರಿಸ್ ಅವರ ಅಜ್ಜಿಯರು ಹುಟ್ಟಿ ಬೆಳೆದ ಗ್ರಾಮವನ್ನು ನೋಡಲು ಬಂದಿದ್ದೇನೆ, ನಾವು ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ, ನಾವು ಆತಂಕದಲ್ಲಿದ್ದೇವೆ, ಅವರು ಗೆಲ್ಲಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.

ಇದೇ ವೇಳೆ, ಕಮಲಾ ಹ್ಯಾರಿಸ್‌ಗಾಗಿ ತಿರುವರೂರಿನ 'ತುಳಸೇಂದ್ರಪುರಂ' ಗ್ರಾಮದಲ್ಲಿ ಅನುಷಾನಾಥ್ ಅವರ ಅನುಕ್ರಾಗ್ನಿ ಸಂಸ್ಥೆಯಿಂದ ಮತ್ತೊಂದು ಪೂಜೆಯನ್ನು ಆಯೋಜಿಸಲಾಗಿತ್ತು.

ಸಂಸ್ಥೆಯ ಸಂಸ್ಥಾಪಕ ಬಳ್ಳು ಅವರು ಮುಂಬರುವ ಚುನಾವಣೆಯಲ್ಲಿ ಉಪಾಧ್ಯಕ್ಷ ಹ್ಯಾರಿಸ್ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಮಲಾ ಹ್ಯಾರಿಸ್ ಅವರು ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ, ಅವರು ಚುನಾವಣೆಯಲ್ಲಿ ಗೆಲ್ಲುವುದು ಖಚಿತ, ಅವರ ಗೆಲುವಿಗಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದೇವೆ, ಚುನಾವಣೆಯಲ್ಲಿ ಗೆದ್ದರೆ ಇಡೀ ರಾಜ್ಯಕ್ಕೆ ಸಂತಸ ತಂದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರುದ್ರಣ್ಣ ಆತ್ಮಹತ್ಯೆಗೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು: ಬಿಜೆಪಿ ಆಗ್ರಹ