ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಸರ್ಕಾರ ಸಿಕ್ಕಿದ್ದಕ್ಕೆಲ್ಲಾ ಆಧಾರ್ ಕಡ್ಡಾಯ ಮಾಡುತ್ತಿದೆ. ಈ ಆಧಾರ್ ಅವಾಂತರ ಎಲ್ಲಿಯವರೆಗೆ ಮುಟ್ಟಿದೆ ಎಂಬುದಕ್ಕೆ ಇದೊಂದು ಉದಾಹರಣೆ.
ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ಸಂಖ್ಯೆಗೆ ಆಧಾರ್ ಕಡ್ಡಾಯವಾಗಿ ಬೇಕು ಎನ್ನುವ ನಿಯಮವೇನೋ ಸರಿ. ಆದರೆ ಉತ್ತರ ಪ್ರದೇಶ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ಷಯ ರೋಗಿಗಳಿಗೂ ಆಧಾರ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆಯಂತೆ.
ರೋಗಿಗಳಿಗೂ ಆಧಾರ್ ಗೂ ಏನು ಸಂಬಂಧ ಎಂದು ತಲೆಕೆರೆದುಕೊಂಡಿರಾ? ಕ್ಷಯ ರೋಗಿಗಳು ಉಚಿತ ಆಂಬ್ಯುಲೆನ್ಸ್ ಸೇವೆ ಪಡೆಯಬೇಕಾದರೆ ಇನ್ನು ಆಧಾರ್ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ