ಕಾಶ್ಮೀರದಲ್ಲಿ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿರುವ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಏಕತೆ ಮತ್ತು ಪ್ರೀತಿಯ ಮಂತ್ರಗಳನ್ನು ಪ್ರತಿಪಾದಿಸಿದರು.
ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಪ್ರಧಾನಿ, ಏಕತೆ ಮತ್ತು ಪ್ರೀತಿಯ ಮಂತ್ರಗಳಿಂದ ಕಾಶ್ಮೀರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಪ್ರಧಾನಮಂತ್ರಿ ಭಾನುವಾರ ತಿಳಿಸಿದರು. ಕಣಿವೆಯಲ್ಲಿ ಪ್ರಸಕ್ತ ಪ್ರಕ್ಷುಬ್ಧ ಸ್ಥಿತಿಯು ರಾಷ್ಟ್ರಕ್ಕುಂಟಾಗುವ ನಷ್ಟ ಎಂದು ಪ್ರತಿಪಾದಿಸಿದರು.
ಕೆಲವು ಜನರು ಯುವಕರನ್ನು ದುರ್ಮಾರ್ಗಗಳಿಗೆ ಪ್ರಚೋದಿಸುವ ಮೂಲಕ ಕಾಶ್ಮೀರದಲ್ಲಿ ಶಾಂತಿಯನ್ನು ಕದಡುವ ಯತ್ನ ಮಾಡಿದ್ದಾರೆ.ಬಹು ಬೇಗ ಅಥವಾ ತಡವಾಗಿ ಇಂತಹ ಜನರು ತಮ್ಮ ದುಷ್ಕೃತ್ಯಗಳಿಗಾಗಿ ಈ ಯುವಕರಿಗೆ ಉತ್ತರಿಸಬೇಕಾಗಬಹುದು ಎಂದು ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆಗಳನ್ನು ಬಿತ್ತುವರರನ್ನು ತರಾಟೆಗೆ ತೆಗೆದುಕೊಂಡರು.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಿಂಸಾಚಾರವನ್ನು ನಿಲ್ಲಿಸುವಂತೆ ಪ್ರತಿಭಟನೆಕಾರರಿಗೆ ಮನವಿ ಮಾಡಿದ ಮರುದಿನವೇ ಪ್ರಧಾನಿ ಹೇಳಿಕೆ ಹೊರಬಿದ್ದಿದೆ.
ಈ ದೇಶವು ಅತೀ ದೊಡ್ಡದಾಗಿದ್ದು ವೈವಿಧ್ಯತೆಯಿಂದ ಕೂಡಿದೆ. ಇದರ ಏಕತೆಯನ್ನು ಬಲಪಡಿಸುವ ಹೊಣೆಗಾರಿಕೆ ಪೌರರಾಗಿ ನಮ್ಮೆಲ್ಲರಿಗೆ, ಸಮಾಜಕ್ಕೆ ಮತ್ತು ಸರ್ಕಾರಕ್ಕಿದೆ. ಆಗ ಮಾತ್ರ ರಾಷ್ಟ್ರ ಭವ್ಯ ಭವಿಷ್ಯ ಸಾಧಿಸಬಹುದು. ಈ ದೇಶದ 125 ಕೋಟಿ ಜನರ ಶಕ್ತಿ ಮೇಲೆ ನನಗೆ ವಿಶ್ವಾಸವಿದೆ ಎಂದು ಮೋದಿ ಪ್ರತಿಪಾದಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ