ಡಿಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಸಂದರ್ಭದಲ್ಲೇ ಭೂಗತ ಪಾತಕಿ ರವಿ ಪೂಜಾರಿ, ಸಂಸದ ಡಿ.ಕೆ. ಸುರೇಶ್ ಅವರಿಗೆ ಕರೆ ಮಾಡಿ ಹಣ ಸುಲಿಗೆಗೆ ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಡಿ.ಕೆ. ಸುರೇಶ್ ಕಚೇರಿಗೆ 14 ನಂಬರಿನಿಂದ ಕರೆ ಬಂದಿದ್ದು, ನಿಮ್ಮ ಬಳಿ ಬೇನಾಮಿ ಆಸ್ತಿ ಇರುವುದು ನನಗೆ ಗೊತ್ತಿದೆ. ನಮಗೂ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆಂದು ತಿಳಿದು ಬಂದಿದೆ. ನಮಗೂ ಕೊಡಿ ಇಲ್ಲವಾದರೆ ಪರಿಣಾಮ ಎದುರಿಸುತ್ತಿರಿ ಎಂದು ಬೆದರಿಕೆ ಹಾಕಿದ್ದಾನೆ. ಕರೆ ಸ್ವೀಕರಿಸಿದ್ದ ಆಪ್ತ ಸಹಾಯಕರು ಸುರೇಶ್ ಮನೆಯಲ್ಲಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ೆ.
ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಹಫ್ತಾ ವಸೂಲಿಗೆ ಯತ್ನಿಸಿದ್ದಾನೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರವಿ ಪೂಜಾರಿ ಹೆಸರಿನಲ್ಲಿ ಬೇರೆಯವರೂ ಕರೆ ಮಾಡಿರುವ ಸಾಧ್ಯತೆ ಇದ್ದು, ಇಂಟರ್ನೆಟ್ ಕಾಲ್ ಮೂಲದ ಬಗ್ಗೆ ತನಿಖೆ ನಡೆಸಲು ಸೈಬರ್ ಕ್ರೈಂಗೆ ಪ್ರಕರಣ ಹಸ್ತಾಂತರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ