ನೋಟು ನಿಷೇಧಧ 22 ದಿನಗಳ ನಂತರವೂ ಬ್ಯಾಂಕ್‌ಗಳು ಹಣದ ಕೊರತೆ ಎದುರಿಸುತ್ತಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನೋಯ್ಡಾ- ಸಿಕಂದರಾಬಾದ್ ರಸ್ತೆಯನ್ನು ಸುಮಾರು ಒಂದು ಗಂಟೆ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾನಕೂರ್ ಪಟ್ಟಣದ ಮಂಡಿ ಶ್ಯಾಮ್ ನಗರ್ ಪ್ರದೇಶದಲ್ಲಿರುವ ಬ್ಯಾಂಕ್‌ಗಳಉ ತಮ್ಮ ಬ್ಯಾಂಕ್ ಮುಂದೆ ನೋ ಕ್ಯಾಶ್ ಎಂದು ಬೋರ್ಡ್ ಹಾಕಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಗ್ರಾಮಸ್ಥರು ಬ್ಯಾಂಕ್‌ಗಳಿಗೆ ನುಗ್ಗಿ ಹೊರಗಡೆಯ ದ್ವಾರಗಳಿಗೆ ಬೀಗ ಜಡಿದಿದ್ದಲ್ಲದೇ ರಸ್ತೆ ತಡೆ ನಡೆಸಿದಾಗ ಸಾವಿರಾರು ವಾಹನಗಳು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳಿಂದ 2000 ರೂಪಾಯಿಗಳನ್ನು ಡ್ರಾ ಮಾಡಲು ಬ್ಯಾಂಕ್‌ಗೆ ಬರುತ್ತಿದ್ದೇನೆ. ಆದರೆ, ಹಣ ದೊರೆಯುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಎಟಿಎಂಗಳಲ್ಲೂ ಹಣವಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.