Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೈದ್ರಾಬಾದ್ ವಿಮಾನಕ್ಕೆ ಚಾಲನೆ ನೀಡಿದ ಉಮೇಶ್ ಜಾಧವ್

ಹೈದ್ರಾಬಾದ್ ವಿಮಾನಕ್ಕೆ ಚಾಲನೆ ನೀಡಿದ ಉಮೇಶ್ ಜಾಧವ್
ನವದೆಹಲಿ , ಮಂಗಳವಾರ, 19 ಏಪ್ರಿಲ್ 2022 (07:46 IST)
ಕಲಬುರಗಿ : ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಿಂದ ಹಲವು ಲೋಹದ ಹಕ್ಕಿಗಳು ಬೇರೆ-ಬೇರೆ ರಾಜ್ಯಗಳಿಗೆ ಹಾರಾಡುವಂತೆ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ ಹೇಳಿದರು.
 
ಸೋಮವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗೋವಾ-ಕಲಬುರಗಿ ವಯಾ ಹೈದ್ರಾಬಾದ್ ವಿಮಾನ ಹಾರಾಟವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಕಲಬುರಗಿ ಜಿಲ್ಲೆಯ ವೃದ್ಧರು, ರೋಗಿಗಳು ತುರ್ತು ಚಿಕಿತ್ಸೆಗಾಗಿ ಹೈದ್ರಾಬಾದಿಗೆ ಹಾಗೂ ಹೈದ್ರಾಬಾದ್ನಿಂದ ಬೆಂಗಳೂರಿಗೆ ತೆರಳಲು ಈ ವಿಮಾನ ಅನುಕೂಲಕರವಾಗಿದೆ ಎಂದು ವಿವರಿಸಿದರು.  

ಹೈದ್ರಾಬಾದ್ನಿಂದ ಪವಿತ್ರ ಸ್ಥಳಗಳಾದ ಹಜ್, ಕಾಶಿ, ಅಯೋಧ್ಯಾ, ಅಮರನಾಥ್, ವೈಷ್ಣೋದೇವಿ ಹಾಗೂ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳಲು ಅನುಕೂಲಕರವಾಗಿದೆ.

ನಮ್ಮ ಕಲಬುರಗಿ ಹಾಗೂ ವಿಭಾಗದ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ಕಾರದ ಕೊರೊನಾ ನಿಯಮಗಳನ್ನು ಪಾಲಿಸಿ ವಿಮಾನದಲ್ಲಿ ಬಿಡಲು ತಿಳಿಸಿದರು. ವೃದ್ಧರಿಗೆ ಹಾಗೂ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿ ಸಿಬ್ಬಂದಿಗಳಿಗೆ ಸೂಚಿಸಬೇಕೆಂದು ಅವರು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಟವರ್ ಏರಿ ಕುಳಿತ ಭೂಪ! ಮುಂದೇನಾಯ್ತು..?