ಬೆಂಗಳೂರು: ಕಪ್ಪು ಹಣ ಬಿಳಿ ಮಾಡುವ ದಂಧೆಯಲ್ಲಿ ಮತ್ತಿಬ್ಬರು ಆರ್ ಬಿಐ ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಗಳನ್ನು ನಿಯಂತ್ರಿಸುವ ಆರ್ ಬಿಐ ಅಧಿಕಾರಿಗಳೇ ಈ ದಂಧೆಯಲ್ಲಿ ಸಿಕ್ಕಿ ಬೀಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಕೃತ್ಯ.
ಸುಮಾರು 2ಕೋಟಿ ರೂ. ಮೌಲ್ಯದ 500, 1000 ರೂ ಮೌಲ್ಯದ ನೋಟುಗಳನ್ನು ಸಕ್ರಮಗೊಳಿಸುವ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ನಗದು ವಿಭಾಗದ ಸದಾನಂದ ಮತ್ತು ಕೆವಿನ್ ಬಂಧಿತರು. ಈ ಹಿಂದೆ ಒಬ್ಬ ಆರ್ ಬಿಐ ಅಧಿಕಾರಿಯನ್ನು ಇದೇ ಆರೋಪದಲ್ಲಿ ಬಂಧಿಸಲಾಗಿತ್ತು.
ಬಂಧಿತರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 21 ರವರೆಗೆ ಸಿಬಿಐ ವಶಕ್ಕೊಪ್ಪಿಸಲಾಗಿದೆ. ಈ ಹಿಂದೆ ಬಂಧಿತರಾಗಿದ್ದ ಮೈಕಲ್ ಜತೆಗೆ ಇವರಿಗೆ ನಂಟಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ