ನವದೆಹಲಿ: ಕರ್ತಾಪುರ್ ಕಾರಿಡಾರ್ ಉದ್ಘಾಟನೆಗೆ ಭಾರತದ ಹಾಲಿ ಪ್ರಧಾನಿ ಮೋದಿಯನ್ನು ಬಿಟ್ಟು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಪಾಕಿಸ್ತಾನ ಸರ್ಕಾರ ಆಹ್ವಾನ ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನದ ಈ ಆಹ್ವಾನ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಗೆ ಇರಿಸು ಮುರಿಸು ಸೃಷ್ಟಿಸಿದೆ. ಪಾಕ್ ಆಹ್ವಾನವನ್ನು ಒಪ್ಪಿದರೆ ಬಿಜೆಪಿ ಸೇರಿದಂತೆ ಹಲವರ ಟೀಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಮನಮೋಹನ್ ಸಿಂಗ್ ಈ ಆಹ್ವಾನವನ್ನು ತಿರಸ್ಕರಿಸುವ ಸಾಧ‍್ಯತೆಯೇ ಹೆಚ್ಚಿದೆ. ಅತ್ತ ಪಾಕಿಸ್ತಾನದ ಈ ನಡೆಯ ಬಗ್ಗೆ ಟ್ವಿಟರ್ ನಲ್ಲಿ ಭಾರೀ ಚರ್ಚೆಯಾಗಿದ್ದು, ಹಲವರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವರು ಪಾಕಿಸ್ತಾನದ ನಡೆಯನ್ನು ಟೀಕಿಸಿದ್ದರೆ ಮತ್ತೆ ಕೆಲವರು ಪಾಕ್ ಗೆ ಯಾಕೆ ಕಾಂಗ್ರೆಸ್ ನಾಯಕರ ಮೇಲೆ ಹೆಚ್ಚು ಪ್ರೀತಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಂತೂ ಪಾಕ್ ಮಾಡಿದ ಎಡವಟ್ಟಿನಿಂದ ಮನಮೋಹನ್ ಸಿಂಗ್ ಚರ್ಚೆಯ ಕೇಂದ್ರ ಬಿಂದುವಾಗುವಂತಾಗಿದೆ.