ನವದೆಹಲಿ: ಮಕ್ಕಳ ಆಟ ಕೆಲವೊಮ್ಮೆ ಎಂತಹಾ ದುರಂತ ತಂದಿಡುತ್ತವೆ ನೋಡಿ. ಈ ಇಬ್ಬರು ಅವಳಿ ಮಕ್ಕಳು ಆಟವಾಡುತ್ತಾ ಕಾರಿನೊಳಗೆ ಬಂಧಿಯಾಗಿ ಪ್ರಾಣವನ್ನೇ ಕಳೆದುಕೊಂಡಿವೆ.
ಇಂತಹದ್ದೊಂದು ದಾರುಣ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿಯಲ್ಲಿ. ಹರ್ಷಿತಾ ಮತ್ತು ಹರ್ಷಾ ಎಂದು ಈ ಮಕ್ಕಳ ಹೆಸರು. ರಜೆಗೆಂದು ಅಜ್ಜನ ಮನೆಗೆ ಬಂದಿದ್ದ 5 ವರ್ಷದ ಅವಳಿ ಸಹೋದರಿಯರು ಮನೆಯ ಹಿಂದೆ ನಿಲ್ಲಿಸಿದ್ದ ಹುಂಡೈ ಕಾರಿನೊಳಗೆ ಕುಳಿತು ಆಟವಾಡುತ್ತಿದ್ದರು.
ಅಕಸ್ಮಾತ್ತಾಗಿ ಕಾರಿನ ಬಾಗಿಲು ಲಾಕ್ ಆಗಿದ್ದು, ಗ್ಲಾಸ್ ಕೂಡಾ ಬಂದ್ ಆಗಿತ್ತು. ಆದರೆ ಲಾಕ್ ಜಾಮ್ ಆಗಿದ್ದರಿಂದ ಈ ಕಂದಮ್ಮಗಳಿಗೆ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ಹೀಗೇ ಎರಡು ಗಂಟೆಗಳ ಕಾಲ ಹೋರಾಟ ನಡೆಸಿ ಕೊನೆಗೆ ಉಸಿರುಗಟ್ಟಿ ಇಬ್ಬರೂ ಸಾವನ್ನಪ್ಪಿದ್ದಾರೆ.
ತುಂಬಾ ತುಂಟರಾಗಿದ್ದ ಈ ಬಾಲಕಿಯರು ಒಮ್ಮೆ ವಿದ್ಯುತ್ ಪೋಲ್ ಏರಲೂ ಯತ್ನಸಿದ್ದರಂತೆ! ಆದರೆ ಇವರ ತುಂಟಾಟವೇ ಪ್ರಾಣಕ್ಕೆ ಎರವಾಗಿದ್ದು ದುರದೃಷ್ಟ.