Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಯೋವೃದ್ಧರು, ವಿಕಲಚೇತನರ ದೇವರ ದರ್ಶನಕ್ಕೆ ವಿಶೇಷ ಕೌಂಟರ್ ಆರಂಭಿಸಿದ ಟಿಟಿಡಿ

ವಯೋವೃದ್ಧರು, ವಿಕಲಚೇತನರ ದೇವರ ದರ್ಶನಕ್ಕೆ ವಿಶೇಷ ಕೌಂಟರ್ ಆರಂಭಿಸಿದ ಟಿಟಿಡಿ
ತಿರುಪತಿ ತಿರುಮಲ , ಶುಕ್ರವಾರ, 2 ಜೂನ್ 2017 (15:48 IST)
ಯಾವುದೇ ಕ್ಯೂ ನೋಡಿದರೂ ಒಳ್ಳೆ ತಿರುಪತಿ ಕ್ಯೂ ಇದ್ದಂಗಿದೆ ಎನ್ನುವ ಮಾತುಗಳನ್ನ ಕೇಳೇ ಇರುತ್ತೀರಿ. ತಿರುಪತಿಯಲ್ಲಿ ದೇವರ ದರ್ಶನ ಮಾಡುವುದೆಂದರೆ ಅದೊಂದು ಹರಸಾಹಸ. ಗಂಟೆಗಳಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕು. ಅದರಲ್ಲೂ ವಯೋವೃದ್ಧರು ಮತ್ತು ವಿಕಲಚೇತನರು ಕ್ಯೂನಲ್ಲಿ ಸುಸ್ತಾಗಿ ವಾಪಸ್ ಹೋಗಿರುವುದೂ ಇದೆ. ಆದರೆ, ಈ ಸಮಸ್ಯೆಗೆ ಟಿಟಿಡ ತೆರೆ ಎಳೆದಿದೆ.

ಹೌದು, ಈ ಸಮಸ್ಯೆಯನ್ನ ಮನಗಂಡಿರುವ ಕಾರ್ಯಕಾರಿ ಅಧಿಕಾರಿ ಅನಿಲ್ ಸಿಂಘಾಲ್ ಆದೇಶದ ಮೇರೆಗೆ ವಯೋವೃದ್ಧರು ಮತ್ತು ವಿಶೇಷಚೇತನರಿಗೆ ಎರಡು ವಿಶೇಷ ಟಿಕೆಟ್ ಕೌಂಟರ್ ಮತ್ತು ದರ್ಶನಕ್ಕೆ ವಿಶೇಷ ಮಾರ್ಗವನ್ನ ಅಳವಡಿಸಲಾಗಿದೆ. ಈ ಟಿಕೆಟ್ ಕೌಂಟರ್`ಗಳಲ್ಲಿ ನಿತ್ಯ 1500 ಟಿಕೆಟ್ ವಿತರಿಸಲಾಗುತ್ತೆ.

ಈ ಕೌಂಟರ್`ಗಳಲ್ಲ ಟಿಕೆಟ್ ಪಡೆದು ವಯೋವೃದ್ಧರು, ವಿಕಲಚೇತನರು ಮತ್ತು ಮೇಜರ್ ಆಪರೇಶನ್ ಮಾಡಿಸಿಕೊಂಡವರು ದೇವರ ದರ್ಶನಕ್ಕೆ ನೇರ ಎಂಟ್ರಿ ಪಡೆಯಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗ್ಗಾನ್ ಘಟನೆ ಸಿಎಂ ಲಘುವಾಗಿ ಪರಿಗಣಿಸಬಾರದು: ಕುಮಾರಸ್ವಾಮಿ