Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದ್ವೇಷ ಲೇಖನ: ದೆಹಲಿ ಪೊಲೀಸರಿಂದ ಸುಬ್ರಹ್ಮಣ್ಯಂ ಸ್ವಾಮಿಗೆ ಸಂಕಷ್ಟ

ದ್ವೇಷ ಲೇಖನ: ದೆಹಲಿ ಪೊಲೀಸರಿಂದ ಸುಬ್ರಹ್ಮಣ್ಯಂ ಸ್ವಾಮಿಗೆ ಸಂಕಷ್ಟ
ನವದೆಹಲಿ , ಬುಧವಾರ, 28 ಸೆಪ್ಟಂಬರ್ 2016 (14:37 IST)
ಕಳೆದ 2011 ರಲ್ಲಿ ದ್ವೇಷ ಲೇಖನ ಕುರಿತಂತೆ ದಾಖಲಾದ ಪ್ರಕರಣಕ್ಕೆ ಸಂಬಂದಿಸಿದಂತೆ ರಾಜ್ಯಸಭೆ ಸದಸ್ಯ ಸುಬ್ರಮಣ್ಯಂ ಸ್ವಾಮಿ ವಿಚಾರಣೆ ನಡೆಸಲು ಅನುಮತಿ ದೊರೆತಿದೆ ಎಂದು ದೆಹಲಿ ಪೊಲೀಸರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.  
 
ಎರಡು ಸಮುದಾಯಗಳ ಮಧ್ಯೆ ದ್ವೇಷ ಹೆಚ್ಚಿಸುವ ಲೇಖನ ಬರೆದ ಹಿನ್ನೆಲೆಯಲ್ಲಿ ದೇಶದ ಸಂವಿಧಾನದನ್ವಯ ಸುಬ್ರಹ್ಮಣ್ಯಂ ಸ್ವಾಮಿ ವಿರುದ್ಧ 2011ರ ಅಕ್ಚೋಬರ್ 3 ರಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. 
 
ಮುಸ್ಲಿಮರಿಗೆ ನೀಡಿದ ಮತದಾನದ ಹಕ್ಕನ್ನು ಹಿಂಪಡೆಯಬೇಕು ಎಂದು ಸ್ವಾಮಿ ಬರೆದ ಲೇಖನ ವಿರೋಧಿಸಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ದೂರು ನೀಡಿತ್ತು. ದೂರಿನ ಹಿನ್ನೆಲೆಯಲ್ಲಿ ಸ್ವಾಮಿ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ನಾಯಕರಿಗೆ ಕಾವೇರಿಗಿಂತ ಬಿಬಿಎಂಪಿ ಚುನಾವಣೆ ಹೆಚ್ಚಾಯ್ತಾ: ಬಿಜೆಪಿ ಆಕ್ರೋಶ