ನವದೆಹಲಿ: ಬೇಜವಾಬ್ದಾರಿಯುತ ಹೇಳಿಕೆ ನೀಡಬೇಡಿ ಎಂದು ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ ಬೆನ್ನಲ್ಲೇ ತ್ರಿಪುರಾ ಸಿಎಂ ಬಿಪ್ಲಾಪ್ ಕುಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಡಯಾನಾ ಹೇಡನ್ ಮತ್ತು ಐಶ್ವರ್ಯಾ ರೈ ಇಬ್ಬರೂ ವಿಶ್ವಸುಂದರಿ ಸ್ಪರ್ಧೆ ಗೆದ್ದವರು. ಆದರೆ ಐಶ್ವರ್ಯಾ ರೈಯನ್ನು ನಾವು ಭಾರತದ ಪ್ರತಿನಿಧಿಯಾಗಿ ನೋಡುತ್ತೇವೆ. ಡಯಾನಾರನ್ನು ಯಾವತ್ತಾದರೂ ಹಾಗೆ ಅಂದುಕೊಳ್ಳಲು ಸಾಧ್ಯವೇ?
ಹಿಂದಿನ ಕಾಲದಲ್ಲಿ ಮಹಿಳೆಯರು ಸೌಂದರ್ಯ ವರ್ಧಕವಾಗಿ ಕೃತಕ ಕ್ರೀಮ್ ಗಳನ್ನು ಬಳಸುತ್ತಿರಲಿಲ್ಲ. ಅದೆಲ್ಲಾ ವಿಶ್ವಸುಂದರಿ ಸ್ಪರ್ಧೆಗಳ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಗಳು ಮಹಿಳೆಯರನ್ನು ಮರುಳು ಮಾಡುವ ತಂತ್ರ. ಐಶ್ವರ್ಯಾ ರೈ ವಿಶ್ವಸುಂದರಿಯಾಗಲು ಅರ್ಹಳಾಗಿದ್ದಳು. ಆದರೆ ಡಯಾನಾ ಯಾವತ್ತಾದರೂ ಆ ಪ್ರಶಸ್ತಿಗೆ ಅರ್ಹಳು ಎಂದು ನಿಮಗನಿಸಿದೆಯೇ? ಎಂದು ಬಿಪ್ಲಾಪ್ ಕುಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.