ನವದೆಹಲಿ: ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ಪದ್ಧತಿ ನಿಷೇಧವಾಗುವುದಕ್ಕೆ ಕಾರಣವಾದ ಇಶ್ರತ್ ಜಹಾನ್ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಳೆ.
ತ್ರಿವಳಿ ತಲಾಖ್ ನಿಷೇಧವಾಗಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಇಶ್ರತ್ ನಿನ್ನೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಶ್ರತ್ ಉತ್ತರ ಪ್ರದೇಶ ಮೂಲದವರು.
ಒಟ್ಟು ಐವರು ಅರ್ಜಿದಾರರ ಪೈಕಿ ಇಶ್ರತ್ ಕೂಡಾ ಒಬ್ಬರಾಗಿದ್ದರು. 2014 ರಲ್ಲಿ ಆಕೆಯ ಪತಿ ದೂರವಾಣಿ ಮುಖಾಂತರ ತಲಾಖ್ ನೀಡಿದ್ದ. ಸ್ವತಃ ಈ ಪಿಡುಗಿಗೆ ಬಲಿಯಾಗಿದ್ದ ಇಶ್ರತ್ ತ್ರಿವಳಿ ತಲಾಖ್ ನಿಷೇಧವಾಗಬೇಕೆಂದು ಒತ್ತಾಯಿಸಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ