Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಕಿತ್ಸೆ ನೆಪ: ರೋಗಿಗೆ ಲೈಂಗಿಕ ಕಿರುಕುಳ

ಚಿಕಿತ್ಸೆ ನೆಪ: ರೋಗಿಗೆ ಲೈಂಗಿಕ ಕಿರುಕುಳ
ಚೆನ್ನೈ , ಮಂಗಳವಾರ, 7 ಡಿಸೆಂಬರ್ 2021 (11:05 IST)
ಚೆನ್ನೈ : ಚಿಕಿತ್ಸೆ ಹೆಸರಿನಲ್ಲಿ ವೈದ್ಯನೊಬ್ಬ ರೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಮಿಳುನಾಡಿನ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ನಡೆದಿದೆ.
24 ವರ್ಷದ ರೋಗಿಯೊಬ್ಬರು ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಈ ಪ್ರಕರಣ ಕುರಿತಂತೆ ತನಿಖೆ ನಡೆಸಲು ಆಸ್ಪತ್ರೆಯು ಆಂತರಿಕ ಸಮಿತಿಯನ್ನು ರಚಿಸಿತು. ಸಮಿತಿಯ ಪ್ರಾಥಮಿಕ ಫಲಿತಾಂಶದ ಆಧಾರದ ಮೇಲೆ ಇದೀಗ ಆರೋಪಿ ವೈದ್ಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. 
ಕಿಡ್ನಿ ಕಸಿ ಮಾಡಿಸಿಕೊಂಡಿರುವ ರೋಗಿ ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಹೋಗಿದ್ದ ವೇಳೆ ವೈದ್ಯ ತನಗೆ ರೇಡಿಯಾಲಜಿಸ್ಟ್ ಪರೀಕ್ಷೆಯ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನವೆಂಬರ್ 27ರಂದು ಆಸ್ಪತ್ರೆಗೆ ದೂರು ನೀಡಿದ್ದಾರೆ. 
ಆಕೆಯ ದೂರಿನ ಆಧಾರದ ಮೇಲೆ ಆರೋಪಿ ಡಾ. ಚಕ್ರವರ್ತಿ ವಿರುದ್ಧ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಆಸ್ಪತ್ರೆಯ ಡೀನ್ ಹೇಳಿದ್ದಾರೆ. ಆಸ್ಪತ್ರೆಯ ಸಮಿತಿಯು ಶುಕ್ರವಾರ ಸಂಜೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಬಳಿಕ ವೈದ್ಯರನ್ನು ಅಮಾನತುಗೊಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್​​ನಿಂದ ಭಾರತದಲ್ಲಿ ಮೂರನೇ ಅಲೆ ಆತಂಕ!