ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ರೇಪಿಸ್ಟ್‌ಗಳಿಗೆ ಪೊಲೀಸ್ ಠಾಣೆಗಳಲ್ಲಿ ಚಿತ್ರಹಿಂಸೆ ನೀಡುವಂತೆ ಆದೇಶ ನೀಡಿದ್ದೆ ಎಂದು ಬಿಜೆಪಿ ನಾಯಕಿ, ಫೈರ್‌ಬ್ರಾಂಡ್ ಖ್ಯಾತಿಯ ಉಮಾ ಭಾರತಿ ಹೇಳಿದ್ದಾರೆ.
ಉತ್ತರಪ್ರದೇಶದ ಆಗ್ರಾದಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಅವರು, ಬುಲಂದ್‌ಶಹರ್ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಸಿಎಂ ಅಖಿಲೇಶ್ ವಿಫಲವಾಗಿದ್ದಾರೆ. ಮಧ್ಯಪ್ರದೇಶದಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ರೇಪ್‌ಗೊಳಗಾದವರ ಮುಂದೆ ಆರೋಪಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಆಗ್ರಾದ ಗ್ರಾಮೀಣ ಭಾಗದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಹೇಮಲತಾ ದಿವಾಕರ್ ಪರ ಚುನಾವಣೆ ಪ್ರಚಾರ ನಡೆಸಿದ ಉಮಾಭಾರತಿ, ರೇಪಿಸ್ಟ್‌ಗಳನ್ನು ಚರ್ಮ ಸುಲಿಯುವಂತೆ ಭಾರಿಸಬೇಕು. ನಂತರ ಅವರ ಚರ್ಮದ ಮೇಲೆ ಉಪ್ಪು ಮತ್ತು ಖಾರ ಹಾಕಿ ತಿಕ್ಕಬೇಕು ಎಂದು ಸಲಹೆ ನೀಡಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ರೇಪಿಸ್ಟ್‌ಗಳಿಗೆ ಪೊಲೀಸ್ ಠಾಣೆಗಳಲ್ಲಿ ಚಿತ್ರಹಿಂಸೆ ನೀಡುವಂತೆ ಆದೇಶ ನೀಡಿದ್ದೆ. ಆದರೆ, ಪೊಲೀಸರು ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳುತ್ತಿದ್ದುದಾಗಿ ತಿಳಿಸಿದ್ದಾರೆ.
ಆದರೆ, ಮಾನವ ಹಕ್ಕುಗಳು ಮನುಷ್ಯರಿಗೆ ಮಾತ್ರ ಸೀಮಿತವಾಗಿರುತ್ತವೆಯೇ ಹೊರತು ರೇಪಿಸ್ಟ್‌ರಂತಹ ರಾಕ್ಷಸರಿಗ ಅಲ್ಲ. ರಾಮಾಯಣದಲ್ಲಿ ರಾವಣನ ರುಂಡ ಕತ್ತರಿಸಿದಂತೆ ರೇಪಿಸ್ಟ್‌ಗಳ ರುಂಡ ಕತ್ತರಿಸಬೇಕು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.