ಚೆನ್ನೈ : ಚೆನ್ನೈನಲ್ಲಿರುವ ಅಮೆರಿಕಾ ದೂತಾವಾಸವು ಹೈದರಾಬಾದ್,
ಕೋಲ್ಕತ್ತಾ ಮತ್ತು ಮುಂಬೈನ ಅಮೆರಿಕಾ ದೂತಾವಾಸಗಳ ಸಮನ್ವಯದಲ್ಲಿ ಫೆಬ್ರವರಿ 11ರ ಶುಕ್ರವಾರದಂದು ಆಯೋಜಿಸಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯ ಮೂಲದ,
ಅಮೆರಿಕನ್ ಹದಿಹರೆಯದ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿರಾವ್ ಅವರು ಭಾಗವಹಿಸಲಿದ್ದಾರೆ.
ಡಯಾಸ್ಪೊರಾಡಿಪ್ಲೊಮಸಿ ಸರಣಿಯಲ್ಲಿನ ಆರನೇ ಕಾರ್ಯಕ್ರಮ ವರ್ಚುವಲ್ ಆಗಿ ಫೆಬ್ರವರಿ 11ರಂದು ಸಂಜೆ 6:45ಕ್ಕೆ ನಡೆಯಲಿದ್ದು, ಆಗ ಐದು ನಿಮಿಷಗಳ ಅವಧಿಯ “ಸರ್ಚ್ಆನ್: ಪಾಸಿಟಿವ್ ಕರೆಂಟ್” ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.