ಭೂಪಾಲ: ವಿದೇಶಗಳಿಗೆ ಕೆಲಸದ ನಿಮಿತ್ತ ತೆರಳಲು ಪಾಸ್ ಪೋರ್ಟ್ ಬೇಕಾದರೆ ಮಧ್ಯಪ್ರದೇಶ ರಾಜ್ಯದ ಜನತೆ ಇದೀಗ ಹೊಸ ರೂಲ್ಸ್ ಫಾಲೋ ಮಾಡಲೇಬೇಕು. ಹೌದು ಇಲ್ಲಿನ ಭೂಪಾಲ ಜಿಲ್ಲಾಡಳಿತ ಪಾಸ್ ಪೋರ್ಟ್ ಬೇಕಾದರೆ ಕಡ್ಡಾಯವಾಗಿ ಆ ಮನೆಯಲ್ಲಿ ಶೌಚಾಲಯವಿರಬೇಕೆಂಬ ಕಟ್ಟು ನಿಟ್ಟಿನ ಆದೇಶ ರವಾನಿಸಿದ್ದಾರೆ.
ಅಲ್ಲದೇ ಶೌಚಾಲಯ ಇರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ವೆರಿಫಿಕೇಶನ್ ಪತ್ರ ತರಲು ತಿಳಿಸಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
Passport verification
ಪಾಸ್ ಪೋರ್ಟ್ ಅಪ್ಲಿಕೇಶನ್ ಹಾಕುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲೆಗಳನ್ನು ಗಣನೆಗೆ ತೆದುಕೊಂಡು ಪೊಲೀಸರು ಪರಿಶೀಲಿಸುತ್ತಾರೆ. ಇದೇ ವೇಳೆ ಅರ್ಜಿದಾರನು ಕಡ್ಡಾಯವಾಗಿ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ಲಿಖಿತ ದಾಖಲೆ ಹಾಗೂ ಅದರ ಫೋಟೋ ನೀಡಬೇಕು. ನಗರವಾಸಿಗಳು ನಗರಸಭೆ, ಗ್ರಾಮ ವಾಸಿಗಳು ಗ್ರಾಮ ಪಂಚಾಯಿತಿಯಿಂದ ಪಡೆದು ಸಲ್ಲಿಸತಕ್ಕದ್ದು ಎಂದು ಕಟ್ನಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ತಿವಾರಿ ತಿಳಿಸಿದ್ದಾರೆ.
ಇದೆಲ್ಲದಕ್ಕಿಂತ ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ, 2017-18 ಸಾಲಿನಲ್ಲಿ ಒಟ್ಟು 57 ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಜೊತೆಗೆ ಪ್ರತಿ ಜಿಲ್ಲೆಗಳ ಶಾಲೆಗಳಲ್ಲಿ ಶೌಚಾಲಯ ಜಾಗೃತಿ ಮೂಡಿಸಲಾಗುತ್ತಿದೆ. ಬಯಲು ಮುಕ್ತ ರಾಜ್ಯವನ್ನಾಗಿ ಮಾಡಲು ಸರಕಾರ ಶ್ರಮವಹಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.