ನಂತರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೊಗಾಡಿಯಾ ಅವರು,’ ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸುವ ಭರವಸೆ ಈಡೇರಿಸಿಲ್ಲ. ಕಾಶ್ಮೀರ ಪಂಡಿತರು ಇನ್ನೂ ಅಲ್ಲಿ ಪುನರ್ವಸತಿಗಾಗಿ ಕಾಯುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ಅಷ್ಟೇ ಅಲ್ಲದೆ ರೈತರು ಮತ್ತು ನಿರುದ್ಯೋಗಿ ಯುವ ಜನತೆಗೆ ನೀಡಿದ ಭರವಸೆಗಳನ್ನೂ ಮೋದಿ ಸರ್ಕಾರ ಉಳಿಸಿಕೊಂಡಿಲ್ಲ. 10 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ ವಿಫಲರಾಗಿದ್ದು, ರೈತರಿಗೆ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆಯ ಭರವಸೆಯಂತೆ ಇಲ್ಲಿಯವರೆಗೂ ಒಬ್ಬ ರೈತನೂ ಇದರ ಲಾಭ ಪಡೆದಿಲ್ಲ. ಪ್ರತಿನಿತ್ಯ ರೈತರ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ನೋಡುತ್ತಿದ್ದೇವೆ’ ಎಂದು ಮೋದಿ ವಿರುದ್ಧಅವರು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ