ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಸರಕಾರದಲ್ಲಿ 24 ಕೋಟ್ಯಾಧಿಪತಿಗಳಿದ್ದು, ಎಂಟು ಸಚಿವರು ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ಬಹಿರಂಗವಾಗಿದೆ.
ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಚಿವ ಸಂಪುಟದಲ್ಲಿ ಐವರು ಕೋಟ್ಯಾಧಿಪತಿಗಳಾಗಿದ್ದು, 17 ಸಚಿವರು ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಜಯಲಲಿತಾ ಸಚಿವ ಸಂಪುಟದಲ್ಲಿ 29 ಸಚಿವರಿದ್ದು, 24 ಸಚಿವರು ಕೋಟ್ಯಾಧಿಪತಿಗಳು. ಸರಕಾರ ಸಚಿವರ ಆಸ್ತಿ 8.55 ಕೋಟಿ ರೂಪಾಯಿಗಳಾಗಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಂಸ್ಥೆ ವರದಿ ಮಾಡಿದೆ.
ಮುಖ್ಯಮಂತ್ರಿ ಜಯಲಲಿತಾ 113.73 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ, ಎಐಎಡಿಎಂಕೆ ಸಚಿವ ವೀರಮಣಿ ಕೆ,ಸಿ 27.67 ಕೋಟಿ ರೂ ಮತ್ತು ಬೆಂಜಮಿನ್ 23.02 ಕೋಟಿ ರೂಪಾಯಿಗಳಾಗಿವೆ ಎನ್ನಲಾಗಿದೆ.
ಎಐಎಡಿಎಂಕೆ ಸಚಿವರಲ್ಲಿ ಅತಿ ಕಡಿಮೆ 31,74 ಲಕ್ಷ ರೂ ಆಸ್ತಿ ಘೋಷಣೆ ಮಾಡಿದವರಲ್ಲಿ ಉದಯ್ ಕುಮಾರ್ ಆರ್.ಬಿ. ಸ್ಥಾನ ಪಡೆದಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.
ಎಐಎಡಿಎಂಕೆ ಪಕ್ಷ 22 ಸಚಿವರು ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ.ವಿಜಯ್ ಭಾಸ್ಕರ್ ಅತಿ ಹೆಚ್ಚು ಅಂದರೆ 9.91 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.