ತಿರುಪತಿ ತಿಮ್ಮಪ್ಪ ಜನರು ಕೊಟ್ಟ ಕಾಣಿಕೆಯಿಂದಲೇ ಸಂದ್ಧಿಗ್ದತೆಗೆ ಸಿಲುಕಿದ್ದಾನೆ. ಕಳೆದೆರಡು ತಿಂಗಳಿಂದ ತಿರುಪತಿ ತಿಮ್ಮಪ್ಪನ ಹುಂಡಿಗೆ ಅಮಾನ್ಯಗೊಂಡಿರುವ 500 ಮತ್ತು 1000 ರೂ. ಮುಖಬೆಲೆಯ 4 ಕೋಟಿ ರೂಪಾಯಿಯಷ್ಟು ಹಳೇ ನೋಟುಗಳು ಬಿದ್ದಿವೆ.
ಹಳೇನೋಟು ಬದಲಾವಣೆಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.
ಹಳೇನೋಟು ಬದಲಾವಣೆಗಿದ್ದ ಡಿಸೆಂಬರ್ 30ರ ಡೆಡ್ ಲೈನ್ ಮುಗಿದ ಬಳಿಕವೂ ನೂರಾರು ಭಕ್ತರು ಹುಂಡಿಗೆ ಹೊಸ ನೋಟುಗಳ ಜೊತೆ ಹಳೆಯ ನೋಟುಗಳನ್ನೂ ಹಾಕಿದ್ದಾರೆ. ಈ ಮೊತ್ತವೇ 4 ಕೋಟಿ ರೂಪಾಯಿ ಮೀರಿದೆ. ಡೆಡ್ ಲೈನ್ ಮುಗಿದ ಹಿನ್ನೆಲೆಯಲ್ಲಿ ಮನೆಯಲ್ಲಿಟ್ಟುಕೊಂಡಿದ್ದ ಹಳೆಯ ನೊಟುಗಳನ್ನ ಏನು ಮಾಡಬೇಕೆಂದು ತಿಳಿಯದೆ ಹುಂಡಿಗೆ ಹಾಕಿರಬಹುದೆಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಡೆಡ್ ಲೈನ್ ಮುಗಿದ ಬಳಿಕ 10ಕ್ಕೂ ಹೆಚ್ಚು ಹಳೆಯ ನೋಟುಗಳನ್ನ ಹೊಂದಿರುವವರಿಗೆ 10 ಸಾವಿರದಷ್ಟು ದಂಡ ವಿಧಿಸಲಾಗುತ್ತೆ.